ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ ಹಾಕಿದ ಕಂಡೀಷನ್ ಏನು ಗೊತ್ತಾ?

ಬುಧವಾರ, 29 ಆಗಸ್ಟ್ 2018 (06:52 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಈ ಸಲ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ನಿರ್ಧಾರ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ  ಸಿಹಿಸುದ್ದಿ ನೀಡಿದ್ದಾರೆ.


ಹೌದು. ಕಳೆದ ವರ್ಷ ಸುದೀಪ್  ಹುಟ್ಟು ಹಬ್ಬವನ್ನು  ಆಚರಿಸಿಕೊಂಡಿರಲಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಈ ಸಲ ಸೆಪ್ಟಂಬರ್ 2 ರಂದು ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಅದರ ಜೊತೆಗೆ ಅಭಿಮಾನಿಗಳಿಗೆ ಕೆಲವು ಕಂಡೀಷನ್ ಗಳನ್ನು ಕೂಡ ಹಾಕಿದ್ದಾರೆ.


ಅದೇನೆಂದರೆ ಸೆಪ್ಟಂಬರ್ 2 ಕ್ಕೆ ಕಿಚ್ಚ ಸುದೀಪ್ ಹುಟ್ಟುಹಬ್ಬ ಸಂಭ್ರಮಕ್ಕೆ ಅಂತ ಬರುವ ಯಾರೊಬ್ಬರು ಕೇಕು, ಹೂವಿನ ಹಾರ, ಶಾಲು, ಗಿಫ್ಟ್‌ಗಳನ್ನು ಯಾವ ಕಾರಣಕ್ಕೂ ತರಬಾರದು. ಒಂದೇ ಒಂದೇ ಕೇಕು ಕೂಡ ಕಾಣಬಾರದು. ಬರೀ ಕೈಯಲ್ಲಿ ಬಂದು ವಿಶ್ ಮಾಡಿ ಎಂದು ಸುದೀಪ್ ಹೇಳಿದ್ದಾರೆ. ಇದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರಂತೆ.


ಹಾಗೇ ತಮ್ಮ ಹುಟ್ಟುಹಬ್ಬದ ಸಂಭ್ರಮದ ನೆಪದಲ್ಲಿ ಇಂಥ ಅನಗತ್ಯ ವೆಚ್ಚ ಮಾಡುವ ಬದಲು ಅದೇ ಹಣವನ್ನು ರಾಜ್ಯದಲ್ಲಿರುವ ಎಲ್ಲ ತನ್ನ ಅಭಿಮಾನಿ ಸಂಘಗಳು ಒಂದು ದಿನವಾದರೂ ಹಸಿದವರಿಗೆ ವೆಚ್ಚ ಮಾಡಿಲಿ, ಕೊಡಗು ಸಂಕಷ್ಟಕ್ಕೆ ನೆರವಾಗುವಂತೆ ವೆಚ್ಚ ಮಾಡಲಿ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING