Select Your Language

Notifications

webdunia
webdunia
webdunia
webdunia

ಮಕ್ಕಳನ್ನು ಹೊಂದಲು ನಮಗೇನು ಆತುರವಿಲ್ಲ: ಸೈಫ್ ಆಲಿಖಾನ್

ಮಕ್ಕಳನ್ನು ಹೊಂದಲು ನಮಗೇನು ಆತುರವಿಲ್ಲ: ಸೈಫ್ ಆಲಿಖಾನ್
, ಮಂಗಳವಾರ, 15 ಸೆಪ್ಟಂಬರ್ 2015 (10:42 IST)
ಬಾಲಿವುಡ್ ನಟಿ ರಾಣಿ ಮಖರ್ಜಿ ತಾಯಿಯಾಗುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗಲೇ ನಟ ಸೈಫ್ ಆಲಿಖಾನ್ ಮಕ್ಕಳನ್ನು ಹೊಂದುವ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ನನಗೆ ಮಕ್ಕಳನ್ನು ಹೊಂದಲು ಯಾವುದೇ ಆತುರವಿಲ್ಲ. ಯಾವಾಗ ಕರೀನಾಳಿಗೆ ಮಗುಬೇಕು ಅಂತಾ ಅನ್ನಿಸುತ್ತೋ ಅಲ್ಲಿವರೆಗೂ ಕಾಯುತ್ತೇನೆ ಎಂದಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕರೀನಾ ನಾನು ತಾಯಿಯಾಗಲು ಇಷ್ಟಪಡುತ್ತೇನೆ. ಆದ್ರೆ ಇನ್ನು ಎರಡು ಮೂರು ವರ್ಷ ನಾನು ತಾಯಿಯಾಗಲ್ಲ ಎಂದಿದ್ದರು. ಸೈಫ್ ಆಲಿಖಾನ್ ಅವರಿಗೆ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಂದ ಸಾರಾ ಹಾಗೂ ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸಾರಾ ಬಾಲಿವುಡ್ ಅಂಗಳಕ್ಕೆ ಬರಲು ತಯಾರಿ ನಡೆಸುತ್ತಿದ್ದಾರೆ.
 
2012 ಅಕ್ಟೋಬರ್ ನಲ್ಲಿ ಸೈಫ್ ಹಾಗೂ ಕರೀನಾ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಸದ್ಯ ಕರೀನಾ ಭಜರಂಗಿ ಭಾಯಿಜಾನ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಇನ್ನು ಕರೀನಾ ಕೈಯಲ್ಲಿ ಉತ್ತಮ ಆಫರ್ ಗಳಿವೆ. ಕರೀನಾ ಅವರ ಸದ್ಯದ ಸಿನಿಮಾ ಜೀವನವನ್ನು ನೋಡಿದ್ರೆ ನನಗೆ ತುಂಬಾನೇ ಖುಷಿಯಾಗುತ್ತದೆ ಅಂತಾ ಸೈಫ್ ಆಲಿಖಾನ್ ಹೇಳಿದ್ದಾರೆ.

Share this Story:

Follow Webdunia kannada