Select Your Language

Notifications

webdunia
webdunia
webdunia
webdunia

ಇವತ್ತು ಉಪ್ಪಿಟ್ಟು ತಿನ್ನಿಸಲಿದ್ದಾರೆ ಉಪೇಂದ್ರ

ಇವತ್ತು ಉಪ್ಪಿಟ್ಟು ತಿನ್ನಿಸಲಿದ್ದಾರೆ ಉಪೇಂದ್ರ
, ಶುಕ್ರವಾರ, 14 ಆಗಸ್ಟ್ 2015 (09:41 IST)
ಬರೋಬ್ಬರಿ  5 ವರ್ಷಗಳ ನಂತರ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಉಪ್ಪಿ-2.  ಕಳೆದೆರಡು ವರ್ಷಗಳಿಂದ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟಿ ಹಾಕಿದ್ದ ಈ ಸಿನಿಮಾ ಇವತ್ತು ಪ್ರೇಕ್ಷಕರೆದುರಿಗೆ ಪ್ರತ್ಯಕ್ಷವಾಗಿದೆ.
199ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ಉಪೇಂದ್ರ ಸಿನಿಮಾದ ಸಿಕ್ವೆಲ್ ಇದಾಗಿದ್ದು, ಸಿನಿಮಾ ಈಗಾಗಲೇ ವಿಶ್ವದೆಲ್ಲೆಡೆ ಸುದ್ದಿ ಮಾಡಿದೆ. ಉಪೇಂದ್ರ ಸಿನಿಮಾದಲ್ಲಿ ನಾನು ಅನ್ನೋದನ್ನು ಹೇಳಿದ್ದ ಉಪ್ಪಿ ಇಲ್ಲಿ ನೀನು ಅನ್ನೋದನ್ನು ಹೇಳಲಿದ್ದಾರೆ. ಈ ಸಿನಿಮಾ ಇವತ್ತು ಏಕ ಕಾಲದಲ್ಲಿ ತೆಲುಗು ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಿದೆ.
 
ಈ ಸಿನಿಮಾವನ್ನು ಪ್ರಿಯಾಂಕ ಉಪೇಂದ್ರ ನಿರ್ಮಿಸಿದ್ದು, ಗುರುಕಿರಣ್  ಸಂಗೀತ ಸಿನಿಮಾಕ್ಕಿದೆ. ಅಶೋಕ್ ಕಶ್ಯಪ್ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇನ್ನು ಇವತ್ತು ಈ ಸಿನಿಮಾದ ಜೊತೆಗೆ ಗಣೇಶ್ ಅಭಿನಯ ಬುಗರಿ ಸಿನಿಮಾ ಕೂಡ ರಿಲೀಸ್ ಆಗಿದ್ದು, ಪ್ರೇಕ್ಷಕ ಮಹಾಪ್ರಭು ಉಪ್ಪಿಗೆ ಭೇಷ್ ಅನ್ನೋತ್ತಾರೋ ಗಣೇಶನ ಬಗುರಿಯಾಟಕ್ಕೆ ಮನಸೋಲುತ್ತಾರೋ ಕಾದು ನೋಡ್ಬೇಕು.

Share this Story:

Follow Webdunia kannada