ಪತ್ನಿಯ ಜೊತೆ ಡಬ್ ಸ್ಮಾಶ್ ಮಾಡಲು ಹೋಗಿ ಟ್ರೋಲಿಗರಿಂದ ಕಾಲೆಳೆದುಕೊಂಡ ಲೂಸ್ ಮಾದ ಯೋಗಿ

ಶನಿವಾರ, 8 ಸೆಪ್ಟಂಬರ್ 2018 (07:08 IST)
ಬೆಂಗಳೂರು : ಇತ್ತೀಚೆಗೆ ಡಬ್ ಸ್ಮಾಶ್ ಮಾಡುವ ಹುಚ್ಚು ಹೆಚ್ಚಾಗಿದ್ದು, ಸಾಮಾನ್ಯರು ಮಾತ್ರವಲ್ಲದೇ  ಸೆಲೆಬ್ರಿಟಿಗಳು ಕೂಡ ಡಬ್ ಸ್ಮಾಶ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಡುತ್ತಿದ್ದಾರೆ. ಅದೇರೀತಿ ಇದೀಗ ಲೂಸ್ ಮಾದ ಖ್ಯಾತಿಯ ಯೋಗಿ ಕೂಡ ತಮ್ಮ ಪತ್ನಿಯ ಜೊತೆ ಡಬ್ ಸ್ಮಾಶ್ ಮಾಡಲು ಹೋಗಿ ಟ್ರೋಲಿಗರಿಂದ ಕಾಲೆಳೆದುಕೊಂಡಿದ್ದಾರೆ.


ಯೋಗಿ, ತಮ್ಮ ಪತ್ನಿ ಸಾಹಿತ್ಯ ಜತೆ ಸೇರಿ ಕೆಲ ಸಾಂಗ್​ ಗಳಿಗೆ ಡಬ್​ಸ್ಮಾಶ್ ಮಾಡಿ, ಡಾನ್ಸ್​ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


ಯೋಗಿಯ  ಈ ಪ್ರಯತ್ನಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನ ಕೆಲವರು ಚಿತ್ರಗಳಿಂದ ಅವಕಾಶಗಳಿಲ್ಲ. ಅದಕ್ಕಾಗಿಯೇ ಈ ಕೆಲಸ ಮಾಡುತ್ತಿದ್ದೀರಾ ಎಂದು ಕಾಲೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ನಟಿ ಸೋನಾಲಿ ಬೇಂದ್ರೆ ನಿಧನ ; ಶಾಸಕ ರಾಮ್​ ಕದಂ ಎಡವಟ್ಟು ಟ್ವೀಟ್