Select Your Language

Notifications

webdunia
webdunia
webdunia
webdunia

ಟಾಲಿವುಡ್ ಅಭಿಮಾನಿಗಳ ಸೆಲ್ಫೀ ಕ್ರೇಜ್ ಗೆ ಬೆಚ್ಚಿ ಬಿದ್ದ ರಾಕಿಂಗ್ ಸ್ಟಾರ್ ಯಶ್

ಟಾಲಿವುಡ್ ಅಭಿಮಾನಿಗಳ ಸೆಲ್ಫೀ ಕ್ರೇಜ್ ಗೆ ಬೆಚ್ಚಿ ಬಿದ್ದ ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಮಂಗಳವಾರ, 11 ಡಿಸೆಂಬರ್ 2018 (10:26 IST)
ಬೆಂಗಳೂರು:  ಕೆಜಿಎಫ್ ಚಿತ್ರದ ಕ್ರೇಜ್ ನಿಂದಾಗಿ ರಾಕಿಂಗ್ ಸ್ಟಾರ್ ಯಶ್ ಇದೀಗ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಯಲ್ಲೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.


ಮೊನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯಶ್ ಗೆ ತಮಗೆ ಬೇರೆ ಭಾಷೆಯಲ್ಲೂ ಎಷ್ಟು ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ ಎಂಬುದು ಪಕ್ಕಾ ಗೊತ್ತಾಗಿದೆ.

ಕಾರ್ಯಕ್ರಮದ ಬಳಿಕ ಯಶ್ ವೇದಿಕೆಯಿಂದ ನಿರ್ಗಮಿಸುವಾಗ ಟಾಲಿವುಡ್ ನ ಅಭಿಮಾನಿಗಳು ಯಶ್ ಗೆ ಮುತ್ತಿಗೆ ಹಾಕಿದ್ದು, ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ಜನರು ತಮ್ಮತ್ತ ಈ ಪರಿ ನುಗ್ಗುತ್ತಿರುವುದನ್ನು ನೋಡಿ ಸ್ವತಃ ಯಶ್ ಬೆರಗಾಗಿದ್ದಾರೆ. ಬಳಿಕ ಸಹಾಯಕರ ಸಹಾಯದಿಂದ ಅದು ಹೇಗೋ ವೇದಿಕೆಯಿಂದ ಅಭಿಮಾನಿಗಳಿಂದ ಬಿಡಿಸಿಕೊಂಡು ಕಾರು ಏರುವಷ್ಟರಲ್ಲಿ ಯಶ್ ಗೆ ಸಾಕು ಸಾಕಾಗಿದೆ. ಅಂತೂ ಕನ್ನಡ ನಟನೊಬ್ಬನಿಗೆ ಬೇರೆ ಭಾಷೆಯಲ್ಲೂ ಎಷ್ಟು ಕ್ರೇಜ್ ಇದೆ ಎನ್ನುವುದು ಇದರಿಂದ ಗೊತ್ತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯ ಪೀಡಿತ ಅಭಿಮಾನಿಯ ಬೇಡಿಕೆಗೆ ಕರಗಿದ ಕಿಚ್ಚ ಸುದೀಪ್