Select Your Language

Notifications

webdunia
webdunia
webdunia
webdunia

ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್ ಅವರನ್ನು ಮಗಳ ಮದುವೆಗೆ ಆಮಂತ್ರಿಸಿದ ಶಿವಣ್ಣ

ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್ ಅವರನ್ನು ಮಗಳ ಮದುವೆಗೆ ಆಮಂತ್ರಿಸಿದ ಶಿವಣ್ಣ
, ಶನಿವಾರ, 22 ಆಗಸ್ಟ್ 2015 (12:49 IST)
ಸ್ಯಾಂಡಲ್ ವುಡ್ ಸದ್ಯದಲ್ಲೇ ಬಹುದೊಡ್ಡ ವಿವಾಹ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ. ಶಿವರಾಜ್ ಕುಮಾರ್  ಪುತ್ರಿ ನಿರುಪಮಾ ಅವರ ವಿವಾಹ ಇದೇ ತಿಂಗಳ 30 ಹಾಗೂ 31ರಂದು ನಡೆಯಲಿದೆ. ಹಾಗಾಗಿ ಶಿವಣ್ಣ ಎಲ್ಲರನ್ನು ಮಗಳ ಮದುವೆಗೆ ಆಮಂತ್ರಿಸೋದರಲ್ಲಿ ಬ್ಯುಸಿಯಾಗಿದ್ದಾರೆ.
ಅದರಂತೆ ಲೀಲಾವತಿ ಹಾಗೂ ವಿನೋದ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ ಶಿವಣ್ಣ ಇಬ್ಬರನ್ನೂ ಮದುವೆಗೆ  ಆಮಂತಿಸಿದ್ರು. ಆ ಮೂಲಕ ಲೀಲಾವತಿ ಹಾಗೂ ರಾಜ್  ಕುಟುಂಬದ ನಡುವಿನ ಸಂಬಂಧದ ಬಗ್ಗೆ ತಲೆಗೊಂದು ಮಾತನಾಡುವ ಮಂದಿಯ ಬಾಯಿ ಮುಚ್ಚಿಸಿದ್ರು.
 
ಇನ್ನು ಮೊನ್ನೆ ಮೊನ್ನೆಯಷ್ಟೇ ಗೀತಾ ಹಾಗೂ ಶಿವರಾಜ್ ಕುಮಾರ್ ದಂಪತಿ ಬೆಂಗಳೂರಿನಲ್ಲಿರುವ ವಿವಿಧ ತಾರೆಯರ ಮನೆಗಳಿಗೆ ಭೇಟಿ ನೀಡಿ ಅವರನ್ನೆಲ್ಲಾ ಮದುವೆಗೆ ಆಮಂತ್ರಿಸಿದ್ರು. ಒಟ್ಟಿನಲ್ಲಿ ದೊಡ್ಡಮನೆಯ ಮೊಮ್ಮಗಳ ವಿವಾಹಕ್ಕೆ ಇಡೀ ಕರ್ನಾಟಕವೇ ಬಹು ನಿರೀಕ್ಷೆಯಿಂದ ಕಾಯುತ್ತಿದೆ.

Share this Story:

Follow Webdunia kannada