Select Your Language

Notifications

webdunia
webdunia
webdunia
webdunia

ಉಪೇಂದ್ರ ನಟನೆಯ ಚಿತ್ರದ ಶಿವಂ ಹಾಡುಗಳ ಬಿಡುಗಡೆ ಸಂಭ್ರಮ

ಉಪೇಂದ್ರ ನಟನೆಯ ಚಿತ್ರದ  ಶಿವಂ ಹಾಡುಗಳ  ಬಿಡುಗಡೆ ಸಂಭ್ರಮ
, ಮಂಗಳವಾರ, 2 ಡಿಸೆಂಬರ್ 2014 (11:55 IST)
ಸಾಕಷ್ಟು ವಿವಾದಗಳನ್ನು ಪಡೆದ ಶೀರ್ಷಿಕೆ ಶ್ರೀನಿವಾಸ ರಾಜು ಅವರ ನಿರ್ದೇಶನದ ಉಪೇಂದ್ರ ನಟನೆಯ ಚಿತ್ರ. ಆರಂಭದಲ್ಲಿ ಬ್ರಾಹ್ಮಣ, ಅದಾದ ಬಳಿಕ ಬಸವಣ್ಣ, ಆಮೇಲೆ ಬರಿ ಸಿಂಬಲ್ ಇವೆಲ್ಲ ಆದರೂ ಮತ್ತೆ ಬಸವಣ್ಣ, ಅದು ಸರಿಯಾಗದೆ ಅಂತಿಮವಾಗಿ ಶಿವಂ ಎನ್ನುವ ಶೀರ್ಷಿಕೆ ಕಾಯಂ ಆಗಿದ್ದು ಹಳೆಯ ಕಥೆ. ಈಗ ಈ ಶಿವಂ ಚಿತ್ರದ ಹಾಡುಗಳು ಬಿಡುಗಡೆ ಆಗಿದೆ. ಈ ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ ಕೆ ಶಿವ ಕುಮಾರ್ ಅವರು ಭಾನುವಾರ ಬಿಡುಗಡೆ ಮಾಡಿದರು.
 


ಆ ಕಾರ್ಯಕ್ರಮದಲ್ಲಿ ಸಿನಿ ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು. ಡಿ ಕೆ ಶಿವ ಕುಮಾರ್ ಅಲ್ಲದೆ ಶಿವರಾಜ್ ಕುಮಾರ್, ಉಪೇಂದ್ರ, ಚೆಲುವರಾಯ ಸ್ವಾಮಿ, ಜಮೀರ್ ಖಾನ್ ಈ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದರು. ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು ಮಣಿ ಶರ್ಮ. 
 
ಶಿವಂ ಚಿತ್ರವನ್ನು ಡಾ. ಸಿ ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಭಾರತದ ಫಿಲಂ ಫೆಡರೇಶನ್ ಅಧ್ಯಕ್ಷ ರವಿ ಕೊಟ್ಟಕರ್, ಕೆಎಫ್ಸಿಸಿ ಅಧ್ಯಕ್ಷ ಹೆಚ್ ಡಿ ಗಂಗರಾಜು, ಲಹರಿ ವೇಲು ಮುಂತಾದವರು ಕಾರ್ಕ್ರಮದಲ್ಲಿ ಭಾಗವಹಿಸಿದ್ದರು. ಅಂತೂ ಈಗ ಹಾಡುಗಳನ್ನು ಜನರ ಮುಂದೆ ಇಡುವಂತಾಗಿದೆ. ಚಿತ್ರ ಶೀರ್ಷಿಕೆಗೆ ಪಡೆದಷ್ಟು ಆಕರ್ಷಣೆ ತನ್ನ ಕಥೆಯಿಂದ ಜನರನ್ನು ಆಕರ್ಷಿಸುತ್ತದೆಯೇ?! 

Share this Story:

Follow Webdunia kannada