Select Your Language

Notifications

webdunia
webdunia
webdunia
webdunia

ಕೋಟಿಗೊಬ್ಬ ಚಿತ್ರಕ್ಕಾಗಿ ಸುದೀಪ್ ತೆಗೆದುಕೊಳ್ಳುತ್ತಿರುವ ಕೋಟಿಗಳೆಷ್ಟು ಗೊತ್ತಾ..?

ಕೋಟಿಗೊಬ್ಬ ಚಿತ್ರಕ್ಕಾಗಿ ಸುದೀಪ್ ತೆಗೆದುಕೊಳ್ಳುತ್ತಿರುವ ಕೋಟಿಗಳೆಷ್ಟು ಗೊತ್ತಾ..?
ಬೆಂಗಳೂರು , ಗುರುವಾರ, 6 ಜುಲೈ 2017 (12:41 IST)
ಬೆಂಗಳೂರು: ಕೋಟಿಗೊಬ್ಬ-2 ಚಿತ್ರ ನಿರ್ಮಾಣ ಮಾಡಿದ್ದ ಸೂರಪ್ಪ ಬಾಬು ಈಗ ಕೋಟಿಗೊಬ್ಬ-3 ಚಿತ್ರ ಮಾಡುತ್ತಿದ್ದು, ಕಿಚ್ಚ ಸುದೀಪ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸುದೀಪ್ ತೆಗೆದುಕೊಳ್ಳುತ್ತಿರುವ ಸಂಭಾವನೆ  ಎಷ್ಟುಗೊತ್ತಾ..? ಬರೋಬ್ಬರಿ 8 ಕೋಟಿ ರೂ.
 
ಈಗಾಗಲೇ ಸುದೀಪ್ ಗೆ ನಿರ್ಮಾಪಕ ಸೂರಪ್ಪ ಬಾಬು ಅಡ್ವಾನ್ಸ್ ಕೂಡ ನೀಡಿದ್ದಾರಂತೆ. ಸುದೀಪ್ ಅವರ ಡೇಟ್ಸ್ ಹೊಂದಿಸಿಕೊಂಡು ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್  ಕೂಡ ಆರಂಭಿಸಲಿದೆಯಂತೆ.  ಮೂಲಗಳ ಪ್ರಕಾರ ಚಿತ್ರ ಅಕ್ಟೋಬರ್ ನಲ್ಲಿ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಸುದೀಪ್ ಅಭಿನಿಗಳಿಗಾಗಿಯೇ ಈ ಸಿನಿಮಾ ಮಾಡುತ್ತಿದ್ದು, ಸುದೀಪ್ ಜತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತದೆ ಎಂದು ಸೂರಪ್ಪ ಬಾಬು ತಿಳಿಸಿದ್ದಾರೆ.
 
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಹೆಬ್ಬುಲಿ ಚಿತ್ರದ ನಂತರ ನಿರ್ದೇಶಕ ಕೃಷ್ಣ ಒಟ್ಟಿಗೆ ವಿಲನ್ ಸಿನಿಮಾ ಮಾಡುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಪೂರ್ಣಗೊಳ್ಳಲಿದೆ,  ಕೃಷ್ಣ ಸಿನಿಮಾ ನಂತರ ಬಾಬು ಸಿನಿಮಾ ಕೂಡ ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ ಚೋಪ್ರಾ ತುಂಡುಡುಗೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ತಾಯಿ