Select Your Language

Notifications

webdunia
webdunia
webdunia
webdunia

ಅಪ್ಪು-ಯಶ್ ಫ್ಯಾನ್ಸ್ ನಡುವೆ ವಾರ್ ಎಂದವರು ಯಾರು? ಕಾಲೆಳೆದವರಿಗೆ ತಿರುಗೇಟು ಕೊಟ್ಟ ಯಶ್ ಫ್ಯಾನ್ಸ್

ಅಪ್ಪು-ಯಶ್ ಫ್ಯಾನ್ಸ್ ನಡುವೆ ವಾರ್ ಎಂದವರು ಯಾರು? ಕಾಲೆಳೆದವರಿಗೆ ತಿರುಗೇಟು ಕೊಟ್ಟ ಯಶ್ ಫ್ಯಾನ್ಸ್
ಬೆಂಗಳೂರು , ಸೋಮವಾರ, 4 ಫೆಬ್ರವರಿ 2019 (09:18 IST)
ಬೆಂಗಳೂರು: ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅದನ್ನೀಗ ಯಶ್ ಅಭಿಮಾನಿಗಳು ಸುಳ್ಳು ಮಾಡಿದ್ದಾರೆ.


ಇಬ್ಬರು ಸ್ಟಾರ್ ಗಳ ಅಭಿಮಾನಿಗಳ ನಡುವೆ ವಾರ್ ನಡೆಯುತ್ತಿದೆ. ಇದೀಗ ಅಪ್ಪು ಅಭಿಮಾನಿಗಳು ದರ್ಶನ್ ಅಭಿಮಾನಿಗಳ ಜತೆ ಸೇರಿಕೊಂಡಿದ್ದಾರೆ ಎಂದೆಲ್ಲಾ ಖಾಸಗಿ ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದಕ್ಕೆ ಆಗಲೇ ಯಶ್ ಅಭಿಮಾನಿಗಳು ನಮ್ಮ ಮಧ್ಯೆ ತಂದಿಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಇದೀಗ ಅದನ್ನು ಸಾಬೀತು ಮಾಡಿದ್ದಾರೆ. ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಥಿಯೇಟರ್ ಗಳಲ್ಲಿ ಬುಕಿಂಗ್ ಆರಂಭವಾಗಿದೆ. ಇದರ ಬಗ್ಗೆ ಇದೀಗ ಯಶ್ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದು, ಪವರ್ ಸ್ಟಾರ್ ಸಿನಿಮಾಕ್ಕೆ ಆಲ್ ದಿ ಬೆಸ್ಟ್ ಕೂಡಾ ಹೇಳಿದ್ದಾರೆ. ಆ ಮೂಲಕ ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಸಾಬೀತುಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ದ್ವಿತೀಯ ಪುತ್ರಿಯ ಮದುವೆಗೆ ನಡೆದಿದೆ ಭರ್ಜರಿ ತಯಾರಿ