Select Your Language

Notifications

webdunia
webdunia
webdunia
webdunia

ರುದ್ರತಾಂಡವದಲ್ಲಿ ರವಿಶಂಕರ್ ಅವರ ಡಬಲ್ ಭಾಷಾ ಡೈಲಾಗ್

ರುದ್ರತಾಂಡವದಲ್ಲಿ ರವಿಶಂಕರ್ ಅವರ ಡಬಲ್ ಭಾಷಾ ಡೈಲಾಗ್
, ಬುಧವಾರ, 28 ಜನವರಿ 2015 (10:40 IST)
ಕನ್ನಡ ಚಿತ್ರರಂಗದಲ್ಲಿ ಭಿನ್ನತೆ ಬಗ್ಗೆ ಸಾಕಷ್ಟು ಗಮನ ನೀಡುತ್ತಾರೆ. ಅದಕ್ಕಾಗಿ ಬಹಳ ಶ್ರಮಿಸುತ್ತಾರೆ. ತಮ್ಮ ಪ್ರಯೋಗ ಸೋಲಲಿ ಗೆಲ್ಲಲಿ ಅದರ ಬಗ್ಗೆ ಆದ್ಯತೆ ನೀಡದೆ  ಪ್ರಯತ್ನವನ್ನು ಸದಾ ಜಾರಿಯಲ್ಲಿಡುತ್ತಾರೆ. ರುದ್ರತಾಂಡವ ಚಿತ್ರದ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಚಿರಂಜೀವಿ ಸರ್ಜಾ, ರಾಧಿಕ ಕುಮಾರ್ ಸ್ವಾಮಿ ಅವರ ಅಭಿನಯದ ಚಿತ್ರ ರುದ್ರ ತಾಂಡವ. ಅದನ್ನು ಗುರುದೇಶಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. 
ಈ ಚಿತ್ರದ ಟ್ರೇಲರ್ ಖಳನಟ ಪಿ ರವಿಶಂಕರ್ ಅವರಿಗೆ ಡೆಡಿಕೇಟ್ ಮಾಡಿದ್ದಾರೆ ಚಿತ್ರತಂಡ. ನಾನು ನಟ ಚಿರು ಮತ್ತು ನಿರ್ದೇಶಕ ಗುರು ದೇಶಪಾಂಡೆ ಮತ್ತು ಇಡಿ ಚಿತ್ರತಂಡಕ್ಕೆ  ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ. ನನಗೆ ಈ ಟ್ರೈಲರ್ ಸಂಪೂರ್ಣವಾಗಿ ನನ್ನನ್ನು ಕೇಂದ್ರೀಕರಿಸಿದೆ ಎನ್ನುವ ಸಂಗತಿ ನನಗೆ ತಿಳಿದಿರಲಿಲ್ಲ. ಆದರೆ ಚಿತ್ರತಂಡ ಯಾವಾಗ ನನಗೆ ಈ ದೃಶ್ಯಗಳ ತುಣುಕು ತೋರಿಸಿದರೋ ಆಗ ನನಗೆ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು. ರುದ್ರತಾಂಡವ ಚಿತ್ರದಲ್ಲಿ ಖಳನಾಯಕನನ್ನು ಸರಿಯಾದ ರೀತಿಯಲ್ಲಿ ಮಣಿಸುತ್ತಾನೆ. ಆದರೆ ಅದೆಲ್ಲಕ್ಕಿಂತ ನನಗೆ ಹೆಚ್ಚು ಆದ್ಯತೆ ನೀಡಿರುವ ಸಂಗತಿ ಹೆಚ್ಚು ಖುಷಿ ನೀಡಿದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ ರವಿಶಂಕರ್.  
 
ಇದರಲ್ಲಿ ಅವರು ಮಾಫಿಯ ಡಾನ್ ಆಗಿದ್ದಾರೆ. ನರಸಿಂಹ ಅವರ ಹೆಸರು. ಇಲ್ಲಿ ತೆಲುಗು ಮತ್ತು ಕನ್ನಡ ಎರಡು ಭಾಷೆ ಬಳಕೆ ಮಾಡುವ ಪಾತ್ರಧಾರಿ ಆಗಿದ್ದಾರಂತೆ. ಹಾಗೆ ಮಾತಾಡಿ ಗುರುದೇಶ ಪಾಂಡೆ ಹೇಳಿದ್ದಾರಂತೆ .ಈ  ಪಾತ್ರಕ್ಕಾಗಿ  ನಾನು ಹತ್ತು ದಿನಗಳ ಕಾಲ ಮೀಸಲಿಟ್ಟೆ ಎಂದು ಹೇಳಿದ್ದಾರೆ ರವಿಶಂಕರ್. ಕನ್ನಡಕ್ಕೆ ಕಿಚ್ಚ ಸುದೀಪ್ ಅವರು ರವಿಶಂಕರ್ ಅವರನ್ನು ಬರ ಮಾಡಿಕೊಂಡಿದ್ದು. ಕಂಠದಾನದ ಮೂಲಕ ಜನಪ್ರಿಯತೆ ಗಳಿಸಿದ್ದ ಪ್ರತಿಭಾವಂತ ಬೊಮ್ಮಾಲಿ ರವಿಶಂಕರ್ ಅವರಿಗೆ ಜೀವದಾನ ಮಾಡಿದ್ದು ಕನ್ನಡ ಚಿತ್ರರಂಗ. ತಮ್ಮ ಮಗನನ್ನು ಕನ್ನಡ ಸಿನಿಮಾ ಮೂಲಕ ಬಣ್ಣ ಹಚ್ಚಿಸುವ ಆಲೋಚನೆ ಹಾಗು ಅಸೆ ಇದೆ ರವಿಶಂಕರ್ ಅವರಿಗೆ. ಆ ಮೂಲಕ ತಾವು ಕನ್ನಡಿಗರಿಗೆ ಋಣ ಸಂದಾಯ ಮಾಡುವ ಆಸೆ ಹೊಂದಿದ್ದಾರೆ.  

Share this Story:

Follow Webdunia kannada