Select Your Language

Notifications

webdunia
webdunia
webdunia
webdunia

ಮೇಘನಾ ರಾಜ್ - ಚಿರಂಜೀವಿ ಸರ್ಜಾ ಡೇಟಿಂಗ್ ?

ಮೇಘನಾ ರಾಜ್ - ಚಿರಂಜೀವಿ ಸರ್ಜಾ ಡೇಟಿಂಗ್ ?
, ಶನಿವಾರ, 1 ನವೆಂಬರ್ 2014 (09:33 IST)
ಸಾಮಾನ್ಯವಾಗಿ ಸ್ಯಾಂಡಲ್‌ವುಡ್ ನಲ್ಲಿ ಈ ರೀತಿಯ ಸುದ್ದಿ ಕೇಳಿ ಬರಲ್ಲ. ಆದರೆ ಆಗಾಗ ಅಂತಹ ಸುದ್ದಿ ಕೇಳಿಸಿದರೂ ಆ ಜೋಡಿಯ ಬಗ್ಗೆ ಹೆಚ್ಚು ಗಮನ ನೀಡುವಂತೆ ಮಾಡುತ್ತದೆ. ಅದೇ ರೀತಿ ಆಗಿದೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ವಿಷಯದಲ್ಲೂ ಸಹಿತ. ಅವರಿಬ್ಬರೂ ಈಗ ಡೇಟಿಂಗ್ ಮಾಡುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ ಈಗ. ಅಲ್ಲದೇ ಈ ಜೋಡಿ ಸಧ್ಯದಲ್ಲೇ ಒಟ್ಟಾಗಿ ನಟಿಸುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆನ್ನುವುದಕ್ಕಿಂತ, ಇದು ಬಹುತೇಕ ಸತ್ಯ ಎನ್ನುವ ಸುದ್ದಿ ಹರಡಿದೆ ಗಾಂಧೀ ನಗರದಲ್ಲಿ. 

ಈ ಮುದ್ದು ಚೆಲುವೆ ಈಗ ವಿಜಯ್ ರಾಘವೇಂದ್ರ ಅವರೊಂದಿಗೆ ನಟಿಸುವ ಅವಕಾಶ ಪಡೆದಿದ್ದಾಳೆ. ಅಲ್ಲದೆ ಚಿರು ಜೊತೆಗೂ ಸಹಿತ ಆಕೆ ನಟಿಸುತ್ತಿದ್ದಾಳೆ. ಒಟ್ಟಾರೆ ಕನ್ನಡದ ಯುವ ನಟರ ಜೊತೆ ನಟಿಸುವ ಅವಕಾಶಗಳು ಈ ಚೆಲುವೆಯನ್ನು ಹುಡುಕಿಕೊಂಡು ಬರುತ್ತಿದೆ. 
 
ಈ ಮುದ್ದಾದ ನಟಿ ಚಿರು ಜೊತೆ ನಟಿಸುವ ಬಗ್ಗೆ ಹೆಚ್ಚು ಎಗ್ಜೈಟ್ ಆಗಿರುವ ಬಗ್ಗೆ ಟ್ವೀಟ್ ಮಾಡಿ ಹೇಳಿದ್ದಾಳೆ. ಕನ್ನಡದಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದು ಕೊಳ್ಳುತ್ತಿರುವ ಈ ಹುಡುಗಿ ಕನ್ನಡ ಚಿತ್ರರಂಗ ಆಳುವ ದಿನಗಳು  ಬೇಗ  ಬರಲಿ.. 

Share this Story:

Follow Webdunia kannada