Select Your Language

Notifications

webdunia
webdunia
webdunia
webdunia

ಮತ್ತೊಬ್ಬ ನಟಿಯ ಜೊತೆ ಲವ್ವಿ-ಡುವ್ವಿ ಶುರುಮಾಡಿದ್ರಾ ರಕ್ಷಿತ್ ಶೆಟ್ಟಿ

ಮತ್ತೊಬ್ಬ ನಟಿಯ ಜೊತೆ ಲವ್ವಿ-ಡುವ್ವಿ ಶುರುಮಾಡಿದ್ರಾ ರಕ್ಷಿತ್ ಶೆಟ್ಟಿ
ಬೆಂಗಳೂರು , ಭಾನುವಾರ, 4 ನವೆಂಬರ್ 2018 (13:02 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಜೊತೆ ತಮ್ಮ ಎಂಗೇಜ್ ಮೆಂಟ್ ನ್ನು ಬ್ರೇಕ್ ಅಪ್ ಮಾಡಿಕೊಂಡರು. ಆದರೆ ಇದೀಗ ಅವರ ಹೆಸರು ಮತ್ತೊಬ್ಬ ನಟಿಯ ಜೊತೆ ತಳುಕು ಹಾಕಿಕೊಂಡಿದೆ.


ಹೌದು. ಆ ನಟಿ ಬೇರೆ ಯಾರು ಅಲ್ಲ. ರಕ್ಷಿತ್ ಶೆಟ್ಟಿಯ ಜೊತೆ  ‘ತುಗ್ಲಕ್’ ಸಿನಿಮಾದಲ್ಲಿ ನಟಿಸಿದ ನಟಿ ಮೇಘನಾ ಗಾಂವ್ಕರ್. ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್ ನಲ್ಲಿ ಭಾಗವಹಿಸಿದ ರಕ್ಷಿತ್ ಶೆಟ್ಟಿ ಹಾಗೂ ಮೇಘನಾ ಈ ಸಮಾರಂಭದಲ್ಲಿ ಒಟ್ಟಿಗೆ ಕುಳಿತುಕೊಂಡಿದ್ದು ಇದಕ್ಕೆ ಸಂಬಂಧಪಟ್ಟ  ಫೋಟೊವನ್ನು ಮೇಘನಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಆಪ್ ಲೋಡ್ ಮಾಡಿದ್ದಾರೆ.


ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದ ವೈರಲ್ ಆಗಿದ್ದು, ಕಿರಿಕ್‌ ಸಂಯುಕ್ತ ಹೆಗ್ಡೆ ವಾಹ್ಹ್ ಯೂ ಗಾಯ್ಸ್ ಎಂದು ಕಾಮೆಂಟ್ ಮಾಡಿ ಪಕ್ಕದಲ್ಲಿ ಎರಡು ಹಾರ್ಟ್ ಕೂಡ ಹಾಕಿದ್ದಾರೆ . ನಂತರ ಸಾಲು ಸಾಲು ಕಾಮೆಂಟ್ ಗಳ ಮೂಲಕ ರಕ್ಷಿತ್ ಅವರನ್ನು ಮದುವೆ ಆಗಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ . ಇವೆಲ್ಲವೂ ನೋಡಿದರೆ ರಕ್ಷಿತ್ ಹಾಗೂ ಮೇಘನಾ ನಡುವೆ  ಏನೋ ನಡಿತಿದೆ ಎಂದು ಗಾಂಧಿನಗರದಲ್ಲಿ ಗುಸುಗುಸು ಶುರುವಾಗಿದೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸನ್ನಿ ಲಿಯೋನ್ ಮೇಲೆ ಬಾಟಲಿ ಎಸೆದ ಕಿಡಿಗೇಡಿ