Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಕೊಟ್ಟ ‘ಕಿಸ್’ ಸೂಪರ್ ಹಿಟ್!

ಹೊಸ ವರ್ಷಕ್ಕೆ ಚಂದನ್ ಶೆಟ್ಟಿ ಕೊಟ್ಟ ‘ಕಿಸ್’ ಸೂಪರ್ ಹಿಟ್!
ಬೆಂಗಳೂರು , ಬುಧವಾರ, 2 ಜನವರಿ 2019 (10:18 IST)
ಬೆಂಗಳೂರು: ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತೆ ಹಾಡಿನ ಮೂಲಕ ಸುದ್ದಿಯಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ಅವರು ಹಾಡಿದ ಕಿಸ್ ಸಿನಿಮಾದ ಹಾಡು ಬಿಡುಗಡೆಯಾಗಿ ಒಂದೇ ದಿನಕ್ಕೆ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ.


ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಈ ಹಾಡು ಬಂದಿದ್ದು, ‘ಶೀಲ.. ಸುಶೀಲ’ ಎಂದು ಆರಂಭವಾಗುವ ಹಾಡಿಗೆ ಒಂದೇ ದಿನದಲ್ಲಿ 8.5ಕೆ ಲೈಕ್ಸ್ ಬಂದಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಎಪಿ ಅರ್ಜುನ್ ಹೊಸಬರ ತಂಡ ಕಟ್ಟಿಕೊಂಡು ನಿರ್ದೇಶಿಸುತ್ತಿರುವ ಕಿಸ್ ಸಿನಿಮಾ ಈಗ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಬಹುದಿನಗಳ ನಂತರ ಚಂದನ್ ರ್ಯಾಪರ್ ಹಾಡು ಕೇಳಿ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದಂದು ತಮ್ಮ ಲುಕ್ ತೋರಿಸಲು ಸ್ಪರ್ಧೆಗೆ ಬಿದ್ದ ಸ್ಯಾಂಡಲ್ ವುಡ್ ತಾರೆಯರು