Select Your Language

Notifications

webdunia
webdunia
webdunia
webdunia

ಎರಡನೇ ವಾರವೂ ಕೆಜಿಎಫ್ ಸಕ್ಸಸ್: ಹಿಂದಿ, ಅಮೆರಿಕಾದಲ್ಲಿ ಗಳಿಕೆ ಮಾಡಿದ್ದೆಷ್ಟು?

ಎರಡನೇ ವಾರವೂ ಕೆಜಿಎಫ್ ಸಕ್ಸಸ್: ಹಿಂದಿ, ಅಮೆರಿಕಾದಲ್ಲಿ ಗಳಿಕೆ ಮಾಡಿದ್ದೆಷ್ಟು?
ಬೆಂಗಳೂರು , ಶನಿವಾರ, 29 ಡಿಸೆಂಬರ್ 2018 (09:36 IST)
ಬೆಂಗಳೂರು: ಕೆಜಿಎಫ್ ಯಶಸ್ವೀ ಓಟ ಇನ್ನೂ ಮುಂದುವರಿದಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ.


ಕೆಜಿಎಫ್ ಬಿಡುಗಡೆಯಾಗಿ ಇಂದಿಗೆ ಒಂದು ವಾರ ಕಳೆದಿದೆ. ಈಗಾಗಲೇ ಹಿಂದಿಯಲ್ಲಿ ಜೀರೋ ಸಿನಿಮಾವನ್ನು ಹಿಂದಿಕ್ಕಿರುವ ಕೆಜಿಎಫ್ ಒಂದು ವಾರದಲ್ಲಿ ಬರೋಬ್ಬರಿ 21.45 ಕೋಟಿ ರೂ. ಗಳಿಕೆ ಮಾಡಿದೆ.

ಅಮೆರಿಕಾದಲ್ಲಿ ಅತೀ ಹೆಚ್ಚು ಹಣ ಮಾಡಿರುವ ಸಿನಿಮಾ ಎಂಬ ದಾಖಲೆ ಬರೆದಿರುವ ಕೆಜಿಎಫ್ ಇಲ್ಲಿಯವರೆಗೆ 500 ಮಿಲಿಯನ್ ಡಾಲರ್ ಸಂಪಾದನೆ ಮಾಡಿದೆ ಎಂದು ವರದಿಗಳಾಗಿವೆ. ಕೆಜಿಎಫ್ ಯಶಸ್ಸಿಗೆ ಕಾರಣಕರ್ತರಾಗಿರುವ ಅಭಿಮಾನಿಗಳ ಜತೆ ಯಶ್ ಆಂಡ್ ಟೀಂ ಈಗ ಬೇರೆ ಬೇರೆ ಥಿಯೇಟರ್ ಗಳಿಗೆ ಹೋಗಿ ಅಭಿಮಾನಿಗಳ ಜತೆ ಸಿನಿಮಾ ನೋಡಿ, ಸಂವಾದ ನಡೆಸುತ್ತಿದೆ. ಈ ಮೂಲಕ ಈ ಸಿನಿಮಾ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಟ ಮಟ ಮಧ್ಯಾಹ್ನ ಲೈವ್ ಬಂದು ಜಗ್ಗೇಶ್ ಸಿಎಂ ಕುಮಾರಸ್ವಾಮಿಗೆ ಮಾಡಿದ ಮನವಿಯೇನು?