ಬಿಗ್ ಬಾಸ್ ಮುಗಿದ ಮೇಲೂ ಆಂಡಿ ವಿರುದ್ಧ ‘ಚಿನ್ನು’ ಕವಿತಾ ಗೌಡ ಕಂಪ್ಲೇಟ್ ಮಾಡಿದ್ದೇಕೆ?

ಮಂಗಳವಾರ, 12 ಫೆಬ್ರವರಿ 2019 (09:48 IST)
ಬೆಂಗಳೂರು: ಬಿಗ್ ಬಾಸ್ ಮುಗಿದು ಆಗಲೇ ವಾರ ಕಳೆದಿದೆ. ಆದರೆ ಈಗಲೂ ಬಿಗ್ ಬಾಸ್ ಸ್ಪರ್ಧಿಗಳ ನಡುವಿನ ರಗಳೆ ಮುಗಿದ ಹಾಗೆ ಕಾಣುತ್ತಿಲ್ಲ.


ಬಿಗ್ ಬಾಸ್ ಮನೆಯೊಳಗಿದ್ದಾಗಲೇ ವಿವಾದಾತ್ಮಕ ನಡತೆಯಿಂದ ಸುದ್ದಿಯಾಗಿದ್ದ ಸ್ಪರ್ಧಿ ಆಂಡ್ರ್ಯೂ ಅಲಿಯಾಸ್ ಆಂಡಿ ಹೊರಗೆ ಬಂದ ಮೇಲೂ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಚಿನ್ನು ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಅನುಚಿತವಾಗಿ ವರ್ತಿಸುತ್ತದ್ದ ಆಂಡಿ ಇದೀಗ ಹೊರಗೆ ಬಂದ ಮೇಲೂ ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾನೆಂದು ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅಂತೂ ಇದುವರೆಗೆ ಬಿಗ್ ಬಾಸ್ ಮನೆಯೊಳಗೇ ನಡೆಯುತ್ತಿದ್ದ ರಗಳೆಗಳು ಈಗ ಹೊರಗೆ ಬಂದ ಮೇಲೂ ಕಂಟಿನ್ಯೂ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING