Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಛೋಪ್ರಾ ಅವರನ್ನು ಹಾಡಿ ಹೊಗಳಿದ ಕರೀನಾ ಕಪೂರ್

ಪ್ರಿಯಾಂಕ ಛೋಪ್ರಾ ಅವರನ್ನು ಹಾಡಿ ಹೊಗಳಿದ ಕರೀನಾ ಕಪೂರ್
, ಶುಕ್ರವಾರ, 1 ಜುಲೈ 2016 (08:59 IST)
ಸದ್ಯ ನಟಿ ಪ್ರಿಯಾಂಕ ಛೋಪ್ರಾ ಅವರು ಬಾಲಿವುಡ್ ಅನೇಕ ನವ ನಟಿಯರಿಗೆ ಮಾದರಿ. ಅದಕ್ಕೆ ಕಾರಣ ಪಿಗ್ಗಿ ಬಾಲಿವುಡ್‌ನಂತೆ ಹಾಲಿವುಡ್ ನಲ್ಲೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರೋದು. ಈಗಾಗಲೇ ಅನೇಕ ನಟಿ ಮಣಿಯರು ಪ್ರಿಯಾಂಕ ಛೋಪ್ರಾ ಅವರ ಸಾಧನೆಯನ್ನು ಹಾಡಿಹೊಗಳಿದ್ದಾರೆ. ಈ ಆ ಸರದಿ ನಟಿ ಕರೀನಾ ಕಪೂರ್ ಅವರದ್ದು.

ಪ್ರಿಯಾಂಕ ಚೋಪ್ರಾ ಅವರು ಹಾಲಿವುಡ್ ನಲ್ಲಿ ಸದ್ಯ ತಮ್ಮದೇ ಆದ ಹೆಸರು ಮಾಡಿದ್ದಾರೆ. ಪಿಗ್ಗಿ ಸಾಧನೆಯನ್ನು ಕರೀನಾ ಕಪೂರ್ ಅವರು ಮನಸಾರೆ ಹೊಗಳಿದ್ದಾರೆ. ಪ್ರಿಯಾಂಕ ನಿಜಕ್ಕೂ ಗ್ರೇಟ್.ಆದ್ರೆ ನಾನು ಪ್ರಿಯಾಂಕ ರೀತಿ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ ಅಂತಾ ಹೇಳೋದಿಕ್ಕೆ ಆಗೋದಿಲ್ಲ. ಯಾಕಂದ್ರೆ ನನ್ನ ಆದ್ಯತೆಗಳೇ ಬೇರೆ. ನನಗೀಗ ಮದುವೆಯಾಗಿದೆ. ಕೇವಲ ನನ್ನ ವೃತ್ತಿ ಜೀವನವನ್ನು ಮಾತ್ರ ನಾನು ಗಮನದಲ್ಲಿಕೊಂಡು ಯಾವುದೇ ಕೆಲಸವನ್ನು ಮಾಡೋದಕ್ಕೆ ಸಾಧ್ಯವಿಲ್ಲ. ನನ್ನ ಜವಾಬ್ದಾರಿಗಳು ಆಕೆಯ ಜವಾಬ್ದಾರಿಗಳಿಗಿಂತ ತುಂಬಾನೇ ದೊಡ್ಡದು. ನನಗೆ ಪತಿಯಿದ್ದಾರೆ. ನನ್ನದೇ ಆದ ಕುಟುಂಬವಿದೆ. ನನ್ನ ಹಾಲಿವುಡ್ ಪಯಣಕ್ಕಾಗಿ ನಾನು ಅದೆಲ್ಲವನ್ನು ಬಿಟ್ಟು ಲಾಸ್ ಏಂಜಲೀಸ್ ಗೆ ಹೋಗಿ ಇರೋದಕ್ಕೆ ಸಾಧ್ಯವಿಲ್ಲ ಅಂತಾ ಕರೀನಾ ಹೇಳಿದ್ದಾರೆ.
 
ಇನ್ನು ಪ್ರಿಯಾಂಕ ರೀತಿ ನಾನು ಕೂಡ ಹಾಲಿವುಡ್‌ನಲ್ಲಿ ಕೆಲಸ ಮಾಡಬೇಕಾದರೆ ಅದಕ್ಕೆ ಅಷ್ಟೇ ಪ್ರಮಾಣದಲ್ಲಿ ನಾನು ಹಾರ್ಡ್ ವರ್ಕ್ ಮಾಡಬೇಕು. ಅದಕ್ಕೆ ನಮ್ಮನ್ನು ನಾವು ಅರ್ಪಿಸಿಕೊಳ್ಳಬೇಕು.ಆದ್ರೆ ನಾನು ಆ ವಿಚಾರದಲ್ಲಿ ಸ್ವಲ್ಪ ಸೋಮಾರಿ.ಅಲ್ಲದೇ ನನಗೀಗ ಬಾಲಿವುಡ್ ನಲ್ಲಿ  ನನ್ನದೇ ಆದ ಸ್ಥಾನ ಇದೆ ಅದು ನನಗೆ ಸಾಕು ಅಂತಾ ಕರೀನಾ ಹೇಳಿದ್ದಾರೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ವಿರಾಟ್ ಮತ್ತೆ ಒಂದಾಗೋಕೆ ಕಾರಣ ಸಲ್ಮಾನ್ ಖಾನ್ ಅವರೇನಾ?