Select Your Language

Notifications

webdunia
webdunia
webdunia
webdunia

ನಟಿ ಸನ್ನಿ ಲಿಯೋನಾಗೆ ಈ ಕ್ರಿಕೆಟಿಗ ಅಂದರೆ ತುಂಬಾ ಇಷ್ಟವಂತೆ!

ನಟಿ ಸನ್ನಿ ಲಿಯೋನಾಗೆ ಈ ಕ್ರಿಕೆಟಿಗ ಅಂದರೆ ತುಂಬಾ ಇಷ್ಟವಂತೆ!
ಮುಂಬೈ , ಸೋಮವಾರ, 24 ಸೆಪ್ಟಂಬರ್ 2018 (07:31 IST)
ಮುಂಬೈ : ನೀಲಿ ಚಿತ್ರಗಳಲ್ಲಿ ನಟಿಸಿ ಹುಡುಗರ ಮನಸ್ಸಿನಲ್ಲಿ ಹೊಸ ಸಂಚಲನ ಮೂಡಿಸಿತ್ತಿದ್ದ ಬಾಲಿವುಡ್ ನಟಿ ಸನ್ನಿಲಿಯೋನಾ ಅವರಿಗೆ ಓರ್ವ ಕ್ರಿಕೆಟಿಗ ಅಂದರೆ ಇಷ್ಟವಂತೆ.


ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಸನ್ನಿಲಿಯೋನಾ ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಹೇಳಿದ್ದಾರೆ. ಅವರಿಗೆ ಮಹೇಂದ್ರ ಸಿಂಗ್ ಧೋನಿ ಅಂದರೆ ಇಷ್ಟವಂತೆ. ಯಾಕೆಂದರೆ ಧೋನಿ ಎಷ್ಟೇ ಒತ್ತಡದಲ್ಲಿದ್ದರೂ ಎಷ್ಟು ಕೂಲ್ ಆಗಿರುತ್ತಾರಂತೆ. ಏನೇ ಅಸಾಧ್ಯವಾದ ಸಂದರ್ಭಗಳಿದ್ದರೂ ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿ ಕೊಡುವುದರೊಂದಿಗೆ ಅವರು ತುಂಬಾ ಪ್ರಭಾವಿತರಾಗಿದ್ದಾರೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.


ಇನ್ನು ಹೊಸ ತಲೆಮಾರಿನ ಕ್ರಿಕೆಟಿಗರ ಕುರಿತು ಮಾತನಾಡಿದ ಅವರು , ಹೊಸ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. 2019 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಸನ್ನಿ ಲಿಯೊನ್ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ