Select Your Language

Notifications

webdunia
webdunia
webdunia
webdunia

'ಅಂಬಿ ನಿಂಗ್​ ವಯಸ್ಸಾಯ್ತೋ' ಚಿತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?

'ಅಂಬಿ ನಿಂಗ್​ ವಯಸ್ಸಾಯ್ತೋ' ಚಿತ್ರಕ್ಕೆ  ಅಂಬರೀಶ್ ಪಡೆದ ಸಂಭಾವನೆ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಗುರುವಾರ, 2 ಆಗಸ್ಟ್ 2018 (07:13 IST)
ಬೆಂಗಳೂರು : ಕನ್ನಡ ಚಿತ್ರರಂಗ ಕಂಡ ಹಿರಿಯ ಸ್ಟಾರ್ ನಟರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಕೂಡ ಒಬ್ಬರು. ಇಂದಿಗೂ ಕೂಡ ಅವರ ಅಭಿನಯ ಜನರನ್ನು ಮೋಡಿ ಮಾಡುತ್ತದೆ. ಅಂತಹ ಕಲೆಯುಳ್ಳ ನಟನ ಸಂಭಾವನೆ ಎಷ್ಟು ಎಂಬ ಕುತೂಹಲ ಹಲವರಲ್ಲಿ ಇದ್ದೇ ಇರುತ್ತೆ.


ನಟ ಅಂಬರೀಶ್ ಅವರು ಇದೀಗ ಕಿಚ್ಚ ಕ್ರಿಯೇಷನ್ಸ್​ ಮೂಲಕ ನಿರ್ಮಾಣವಾಗುತ್ತಿರುವ 'ಅಂಬಿ ನಿಂಗ್​ ವಯಸ್ಸಾಯ್ತೋ' ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂದು ಕಿಚ್ಚ ಸುದೀಪ್ ಅವರಲ್ಲಿ ಕೇಳಿದಾಗ ಅದಕ್ಕೆ ಸುದೀಪ್ ಅವರು ಖಡಕ್ ಆಗಿ ಉತ್ತರಿಸಿದ್ದಾರೆ.


'ಮೊದಲಿಗೆ ಸಂಭಾವನೆಯ ಪ್ರಶ್ನೆಯೇ ತಪ್ಪು. ಅಂಬರೀಶ್​ ಅಂದರೇ ಇಡೀ ಕರ್ನಾಟಕದ ಗೌರವ. ನಮ್ಮಿಂದ ಗೌರವ ಸಿಗಲ್ಲಿಲ್ಲ ಅಂದರೆ ಜನ ಸುಮ್ಮನೆ ಇರ್ತಾರಾ. ಅವರು ನನ್ನ ತಂದೆಯ ಸಮಾನ. ಅವರು ಯಾವತ್ತೂ, ಯಾರಲ್ಲೂ ಇಷ್ಟೇ ಸಂಭಾವನೆ ಬೇಕೆಂದು ಕೇಳಿಲ್ಲ. ಎಷ್ಟೇ ಕೊಟ್ಟರೂ ಪ್ರೀತಿಯಿಂದ ತೆಗೆದುಕೊಳ್ತಾರೆ. ನಾವೂ ಸಹ ನಮ್ಮ ಯೋಗ್ಯತೆಗೆ ಸಾಧ್ಯವಾದಷ್ಟು ಸಂಭಾವನೆ ಕೊಟ್ಟಿದ್ದೇವೆ. ಅಲ್ಲದೇ 'ನಾನು ನೀಡಿರೋ ಸಂಭಾವನೆಗಿಂತಲೂ ಜಾಸ್ತಿಯೇ ಅವರು ನಟಿಸಿದ್ದಾರೆ. ಅವರ ಪ್ರೀತಿ, ವಿಶ್ವಾಸ ತುಂಬಾನೇ ದೊಡ್ಡದು. ಸಂಭಾವನೆಯಿಂದ ಅದನ್ನು ಅಳೆಯೋದು ತಪ್ಪು' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಕಿ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ವಿರುದ್ಧ ದೂರು ದಾಖಲು