ಸಿನಿಮಾ ಪ್ರಚಾರಕ್ಕಾಗಿ ‘ಸ್ವಾರ್ಥರತ್ನ’ ಚಿತ್ರತಂಡ ಮಾಡಿದ್ದೇನು ಗೊತ್ತಾ?

ಭಾನುವಾರ, 26 ಆಗಸ್ಟ್ 2018 (11:13 IST)
ಬೆಂಗಳೂರು : ಬೆಂಗಳೂರಿನಲ್ಲಿ ಯಾವುದೇ ಪೋಸ್ಟರ್, ಬ್ಯಾನರ್ ಮತ್ತು ಕಟೌಟ್ ಗಳನ್ನು ಹಾಕಲು ಬಿಡದ ಕಾರಣ ‘ಸ್ವಾರ್ಥರತ್ನ’ ಚಿತ್ರತಂಡವು ಸಿನಿಮಾ ಪ್ರಚಾರಕ್ಕಾಗಿ  ಹೊಸ ವಿಧಾನವೊಂದನ್ನು ಅನುಸರಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.


ಸಿನಿಮಾರಂಗದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳ ಬಗ್ಗೆ ಮಾಹಿತಿ ನೀಡಲು ಗೋಡೆಗಳಲ್ಲಿ ಚಿತ್ರದ ಪೋಸ್ಟರ್ ಗಳನ್ನು ಅಂಟಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ‘ಬಿಬಿಎಂಪಿ’ಯವರು ಯಾವುದೇ ಪೋಸ್ಟರ್ ಗಳನ್ನು , ಬ್ಯಾನರ್ ಗಳನ್ನು ಹಾಕಬಾರದೆಂದು ನಿಯಮ ಹೊರಡಿಸಿದ್ದಾರೆ. ಇದರಿಂದ ಇಡೀ ಕನ್ನಡ ಚಿತ್ರರಂಗವೇ ಕಂಗಲಾಗಿದೆ.


ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ‘ಸ್ವಾರ್ಥರತ್ನ’ ಚಿತ್ರತಂಡ ಸಿನಿಮಾ  ಪ್ರಚಾರಕಾರ್ಯವನ್ನು ಜಟಕಾ ಬಂಡಿ ಹೊರಡಿಸುತ್ತಾ, ವಿಭಿನ್ನವಾಗಿ ಮಾಡುವ ಮೂಲಕ ಗಮನ ಸೆಳೆದಿದೆ. ಪೋಸ್ಟರ್  ಅಂಟಿಸಲು ಅವಕಾಶವಿಲ್ಲದಿದ್ದರೇನಾಯಿತು, ರಸ್ತೆಯಲ್ಲೇ ವಿಭಿನ್ನ ಪ್ರಚಾರ ಮಾಡಬಹುದು ಅಂತಾ ಈ ತಂಡ ತೋರಿಸಿಕೊಟ್ಟಿದೆ. ಇದರೊಂದಿಗೆ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ. ಚಿತ್ರತಂಡದವರ ಈ ಸಾಮಾಜಿಕ ಕಳಕಳಿಯನ್ನು ಕಂಡ ಜನತೆ ಮೆಚ್ಚಿಗೆ  ವ್ಯಕ್ತಪಡಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಲಂಡನ್ ನಲ್ಲಿ ವಿರುಷ್ಕಾ ದಂಪತಿಗೆ ಸಿಕ್ಕ ಆ ವಿಶೇಷ ಅತಿಥಿ ಯಾರು ಗೊತ್ತಾ?