ಡಿ ಬಾಸ್ ದರ್ಶನ್ ‘ಯಜಮಾನ’ನ ಅವತಾರ ಇಂದು ಬಹಿರಂಗ!

ಭಾನುವಾರ, 10 ಫೆಬ್ರವರಿ 2019 (08:03 IST)
ಬೆಂಗಳೂರು: ಡಿ ಬಾಸ್ ದರ್ಶನ್ ಸಿನಿಮಾವೊಂದು ಬಹಳ ದಿನಗಳ ನಂತರ ಬಿಡುಗಡೆಯಾಗುತ್ತಿರುವ ಖುಷಿ ಅವರ ಅಭಿಮಾನಿಗಳಲ್ಲಿದೆ. ಯಜಮಾನ ಚಿತ್ರದ ಹಾಡುಗಳ ನಂತರ ಇದೀಗ ಟ್ರೈಲರ್ ಸರದಿ.


ಇಂದು ಬೆಳಿಗ್ಗೆ ಯಜಮಾನ ಟ್ರೈಲರ್ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಕುತೂಹಲವಿದ್ದರೆ ಈ ಟ್ರೈಲರ್ ಸುಳಿವು ನೀಡಲಿದೆ. ದರ್ಶನ್ ಪಾತ್ರ ಹೇಗಿರಬಹುದು ಎಂಬ ಝಲಕ್ ನೋಡಲು ಇಂದು ಟ್ರೈಲರ್ ನೋಡಿ.

ಈಗಾಗಲೇ ಯಜಮಾನ ಟೈಟಲ್ ಟ್ರ್ಯಾಕ್ ಯೂ ಟ್ಯೂಬ್ ನಲ್ಲಿ ನಂ.1 ಆಗಿ ದಾಖಲೆ ಮಾಡಿತ್ತು. ಅದಲ್ಲದೆ, ಈ ಚಿತ್ರದ ಎಲ್ಲಾ ಹಾಡುಗಳೂ ಈಗಾಗಲೇ ಸೂಪರ್ ಹಿಟ್ ಆಗಿವೆ. ಇದೀಗ ಟ್ರೈಲರ್ ಬಿಡುಗಡೆಯಾಗಲಿದ್ದು, ಅದಾದ ಬಳಿಕವಷ್ಟೇ ಚಿತ್ರ ಬಿಡುಗಡೆಯಾಗುವ ದಿನಾಂಕ ಘೋಷಣೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING