Select Your Language

Notifications

webdunia
webdunia
webdunia
webdunia

ಮದುವೆಯಾದ ಬಳಿಕ ‘ಜಾಕಿ’ ಭಾವನಾ ಕಡೆಯಿಂದ ಬಂದಿದೆ ಮತ್ತೊಂದು ಗುಡ್ ನ್ಯೂಸ್!

ಮದುವೆಯಾದ ಬಳಿಕ ‘ಜಾಕಿ’ ಭಾವನಾ ಕಡೆಯಿಂದ ಬಂದಿದೆ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರು , ಸೋಮವಾರ, 10 ಡಿಸೆಂಬರ್ 2018 (10:28 IST)
ಬೆಂಗಳೂರು: ಕನ್ನಡ ಚಿತ್ರ ನಿರ್ಮಾಪಕ ನವೀನ್ ಕೈ ಹಿಡಿದ ಮೇಲೆ ನಟಿ ಭಾವನಾ ಪತ್ತೆಯೇ ಇಲ್ವಲ್ಲಾ ಎನ್ನುವವರಿಗೆ ಹೊಸ ಸುದ್ದಿಯೊಂದಿಗೆ ಪ್ರತ್ಯಕ್ಷರಾಗಿದ್ದಾರೆ.


ಮಲಯಾಳಿ ಬೆಡಗಿ ಇದೀಗ ಮದುವೆ ಬಳಿಕ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗುಡ್ ನ್ಯೂಸ್ ಎಂದಾಕ್ಷಣ ಏನೇನೋ ಅಂದುಕೊಳ್ಳಬೇಕಾಗಿಲ್ಲ. ಭಾವನಾ ಮದುವೆ ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುವ ಸುದ್ದಿ ಬಂದಿದೆ. ಅದೂ ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ. 99 ಎಂಬ ಗಣಿ ಹೊಸ ಚಿತ್ರಕ್ಕೆ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅಂದ ಹಾಗೆ ಭಾವನಾಗೆ ಇದು ಮದುವೆ ಬಳಿಕ ಎರಡನೇ ಚಿತ್ರ. ಇದಕ್ಕೂ ಮೊದಲು ಅವರು ಪ್ರಜ್ವಲ್ ದೇವರಾಜ್ ಜತೆ ಇನ್ಸ್ ಪೆಕ್ಟರ್ ವಿಕ್ರಂನಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ರೋಮಿಯೋ ಚಿತ್ರದ ನಂತರ ಎರಡನೇ ಬಾರಿಗೆ ಗಣೇಶ್ ಜತೆ ಭಾವನಾ ನಾಯಕಿಯಾಗುತ್ತಿದ್ದಾರೆ. ಇದು ತಮಿಳಿನ 96 ಚಿತ್ರ ರಿಮೇಕ್ ಆಗಿದ್ದು, ರಾಮು ನಿರ್ಮಾಣದಲ್ಲಿ ಮೂಡಿ ಬರುತ್ತಿದ್ದು, ಪ್ರೀತಂ ಗುಬ್ಬಿ ನಿರ್ದೇಶಕರಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಶ್ಚಿತಾರ್ಥ ಮಾಡಿಕೊಂಡ ಧ್ರುವ ಸರ್ಜಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ?!