Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ ಅಭಿನಯಿಸಲಿರುವ ಬಾಲಿವುಡ್ ನ ಖ್ಯಾತ ನಟ

ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ ಅಭಿನಯಿಸಲಿರುವ ಬಾಲಿವುಡ್ ನ ಖ್ಯಾತ ನಟ
ಬೆಂಗಳೂರು , ಸೋಮವಾರ, 4 ಫೆಬ್ರವರಿ 2019 (09:02 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ವಿಭಿನ್ನ ಸಿನಿಮಾಗಳಲ್ಲಿ ತೆರೆಗೆ ಬರುತ್ತಿದ್ದಾರೆ. 99 ಚಿತ್ರದ ದೇವದಾಸ್ ಗೆಟಪ್ ಬಳಿಕ ಇದೀಗ ವೇರ್ ಈಸ್ ಕನ್ನಡಕ ಎಂಬ ಮತ್ತೊಂದು ವಿಭಿನ್ನ ಸಿನಿಮಾದಲ್ಲಿ ಗಣೇಶ್ ಅಭಿನಯಿಸಿವುದು ಪಕ್ಕಾ ಆಗಿದೆ.


ಈ ಚಿತ್ರದ ಮುಹೂರ್ತ ಇದೇ ತಿಂಗಳು ನಡೆಯಲಿದ್ದು, ಏಪ್ರಿಲ್ ನಲ್ಲಿ ಲಂಡನ್ ನಲ್ಲಿ ಚಿತ್ರೀಕರಣ ನಡೆಯಲಿದೆ. ವಿಶೇಷವೆಂದರೆ ವೇರ್ ಈಸ್ ಕನ್ನಡಕ ಸಿನಿಮಾ ಮೂಲಕ ಬಾಲಿವುಡ್ ನ ಖ್ಯಾತ ನಟ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಆಕ್ಷನ್, ಕಾಮಿಡಿ ಎಲ್ಲವೂ ಇರಲಿದೆ. ಈ ಚಿತ್ರದಲ್ಲಿ ಅರ್ಬಾಜ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ರಾಜ್ ಮತ್ತು ದಾಮಿನಿ ಎನ್ನುವವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಪತ್ರಲೇಖಾ ಪೌಲ್ ಗಣೇಶ್ ಗೆ ನಾಯಕಿಯಾಗುತ್ತಿದ್ದಾರೆ. ಇದರೊಂದಿಗೆ ಈ ವರ್ಷ ಬಿಡುಗಡೆಯಾಗಲಿರುವ ಗಣೇಶ್ ಸಿನಿಮಾ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮನ್ನು ಪೂಜೆ ಮಾಡುವ ಪುಟಾಣಿಯ ವಿಡಿಯೋ ನೋಡಿ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?