Select Your Language

Notifications

webdunia
webdunia
webdunia
webdunia

ಬಾಹುಬಲಿ 2ಕ್ಕೆಂದು ಜಿಮ್ ನಲ್ಲಿ ದೇಹ ಹುರಿಗೊಳಿಸುತ್ತಿರುವ ಅನುಷ್ಕ

ಬಾಹುಬಲಿ 2ಕ್ಕೆಂದು  ಜಿಮ್ ನಲ್ಲಿ ದೇಹ ಹುರಿಗೊಳಿಸುತ್ತಿರುವ ಅನುಷ್ಕ
, ಗುರುವಾರ, 23 ಜುಲೈ 2015 (09:56 IST)
ತೆಲುಗು ಚಿತ್ರರಂಗದಲ್ಲಿ ಬಾಹುಬಲಿ ಮಾಡಿರುವ ಹಾಗೂ ಮಾಡುತ್ತಿರುವ ಹೆಸರು ಅಷ್ಟಿಷ್ಟಲ್ಲ. ಆ ಚಿತ್ರದಲ್ಲಿನ ಮಾಹಿಷ್ಮತಿ ರಾಜ್ಯದಲ್ಲಿ ದೇವಸೇನ ಪಾತ್ರಧಾರಿಯಾಗಿದ್ದಾ ನಟಿ ಅನುಷ್ಕ ಶೆಟ್ಟಿ  ಕಡಿಮೆ ಪಾತ್ರದಲ್ಲಿ  ಬಂದರು ಆಕೆಯ ಡಿಗ್ಲಾಮರ್ ಲುಕ್ ಎಲ್ಲರ ಮನ ಗೆದ್ದಿದೆ. ಮುಖ್ಯವಾಗಿ ಗ್ಲಾಮರ್ ಬೊಂಬೆಯಾಗಿ ಜನರ ಮನದಲ್ಲಿ  ಉಳಿದಿದ್ದ ಈ ತಾರೆ ತನ್ನ ನಟನೆಯ ಮೂಲಕ ಗೆದ್ದಿದ್ದಾರೆ. 
ದಿನೇದಿನೇ ಹೊಸ ದಾಖಲೆಗಳನ್ನು ಮಾಡುತ್ತಿರುವ ಈ ಚಿತ್ರದ ಮುಂದುವರೆದ ಭಾಗದಲ್ಲಿ ನಟಿ ಅನುಷ್ಕ ಹಾಗೂ ಸುದೀಪ್ ಅವರಿಗೆ ಹೆಚ್ಚಿನ ಅವಕಾಶ ನೀಡುವುದಾಗಿ ರಾಜಮೌಳಿ ಅವರು ಹೇಳಿರುವ ಬೆನ್ನಲ್ಲೇ ಈಗ ಅನುಷ್ಕ ಮುಂದಿನ ಭಾಗಕ್ಕೆ ಸಂಪೂರ್ಣವಾಗಿ ಸಿದ್ಧರಾಗುತ್ತಿದ್ದಾರಂತೆ. ಆಕೆಯು ಮುಂದಿನ ಭಾಗದಲ್ಲಿ ಮಹಾರಾಣಿಯಾಗಿ ನಟಿಸುವುದಲ್ಲದೆ,ಗ್ಲಾಮರ್ ಬೊಂಬೆಯಾಗಿರುವುದಲ್ಲದೆ, ಅದರ ಜೊತೆ ಯುದ್ಧ ಸನ್ನಿವೇಶಗಳಲ್ಲಿ ಸಹಿತ ಕಂಡು ಬರುವುದಾಗಿ ತಿಳಿದು ಬಂದಿದೆ. ಈ ಕಾರಣದಿಂದ ಆಕೆಯು ತನ್ನ ದೇಹವನ್ನು ಹುರಿಗೊಳಿಸಿ ಸುಂದರವನ್ನಾಗಿ ಮಾಡುತ್ತಿದ್ದಾರೆ. ಎರಡನೇ ಭಾಗಕ್ಕೆ ಸಂಬಂಧಪಟ್ಟಂತೆ ಚಿತ್ರೀಕರಣ ಈಗ ಶೇ. ನಲವತ್ತರಷ್ಟು ಭಾಗ ಪೂರ್ಣವಾಗಿದ್ದು, ಅನುಷ್ಕ ಅದರಲ್ಲಿ ದೇವನ್ನಿಕೆಯಂತೆ ಕಂಡು ಬರುತ್ತಿದ್ದಾರೆ ಎನ್ನುವ ಸಂಗತಿ ತಿಳಿದು ಬಂದಿದೆ. ಒಟ್ಟಾರೆ ಅನೇಕ ಕುತೂಹಲಗಳನ್ನು ಕೆರಳಿಸಿರುವ ಪಾರ್ಟ್ 2 ಬಿಡುಗಡೆ ಆದ ಬಳಿಕ ಮತ್ತಿನ್ಯಾವ ದಾಖಲೆ ನಿರ್ಮಾಣ ಮಾಡುತ್ತದೆಯೋ ಕಾದು ನೋಡುವ.

Share this Story:

Follow Webdunia kannada