Select Your Language

Notifications

webdunia
webdunia
webdunia
webdunia

ಜಗ್ಗುದಾದಾ ಸೆಟ್ ಗೆ ಭೇಟಿ ನೀಡಿದ ರೆಬಲ್ ಸ್ಟಾರ್ ಅಂಬರೀಶ್

ಜಗ್ಗುದಾದಾ ಸೆಟ್ ಗೆ ಭೇಟಿ ನೀಡಿದ ರೆಬಲ್ ಸ್ಟಾರ್ ಅಂಬರೀಶ್
ಬೆಂಗಳೂರು , ಸೋಮವಾರ, 22 ಫೆಬ್ರವರಿ 2016 (11:51 IST)
ಮೊನ್ನೆ ಜಗ್ಗುದಾದ ಸಿನಿಮಾ ತಂಡ ಫುಲ್ ಖುಷಿಯಾಗಿತ್ತು. ಒಂದು ಕಡೆ ಸಂತಸ ಆದ್ರೆ ಮತ್ತೊಂದು ಕಡೆ ಏನ್ ಮಾಡೋದು ಅಂತಾ ಗೊತ್ತಾಗದೇ ಕನ್ಫ್ಯೂಸ್ ಆಗಿತ್ತು. ಅಯ್ಯೋ ಅಂತಹದ್ದೇನಾಯ್ತು ಅಂತಾ ಯೋಚಿಸ್ತಿದ್ದೀರಾ. ಅದಕ್ಕೆ ಕಾರಣ ಅಂಬರೀಶ್ ಆಗಮನ.
 
 ಮಿಸ್ಟರ್  ಐರಾವತ ಸಿನಿಮಾದ ಬಳಿಕ ದರ್ಶನ್ ಅಭಿನಯಿಸುತ್ತಿರುವ ಸಿನಿಮಾದ ಜಗ್ಗುದಾದ. ಸಿನಿಮಾದ ಶೂಟಿಂಗ್ ಭರದಲ್ಲಿ ಸಾಗುತ್ತಿದ್ದು, ಮೊನ್ನೆ ಈ ಸಿನಿಮಾದ ಶೂಟಿಂಗ್ ಸ್ಪಾಟ್ ಗೆ ಅಂಬರೀಶ್ ಅವರು ಆಗಮಿಸಿದ್ದರು. ಅದು ಕೂಡ ಸಂಪ್ರೈಸ್ ವಿಸಿಟ್ ಅಂತೆ. ಅಂಬಿಯವರನ್ನು ನೋಡಿದ್ದೇ ತಡ ಸಿನಿಮಾ ತಂಡ ಫುಲ್ ಖುಷ್. ಅಲ್ಲದೇ ಕೆಲ ಹೊತ್ತು ಸೆಟ್ ನಲ್ಲೇ ಕಳೆದ ಅಂಬರೀಶ್ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ  ಜಗ್ಗುದಾದ ಸಿನಿಮಾದ ಬಗ್ಗೆಯೂ ತಿಳ್ಕೊಂಡ್ರಂತೆ.
 
ಜಗ್ಗುದಾದ ಸಿನಿಮಾವನ್ನು ರಾಘವೇಂದ್ರ ಹೆಗ್ಡೆ ಎಂಬವರು ನಿರ್ದೇಶನ ಮಾಡುತ್ತಿದ್ದು ಇದು ಅವರ ಚೊಚ್ಚಲ ಸಿನಿಮಾ.ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ದರ್ಶನ್ ಅವರೊಂದಿಗೆ ಈ ಹಿಂದಿನ ಸಿನಿಮಾಗಳಲ್ಲಿ ನಾಯಕಿಯಾರಾಗಿ ಕಾಣಿಸಿಕೊಂಡಿದ್ದ ಪ್ರಣೀತಾ ಹಾಗೂ ರಚಿತಾ ರಾಮ್ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada