Select Your Language

Notifications

webdunia
webdunia
webdunia
webdunia

ಆಲಿಯ ಭಟ್ ಮದುವೆ ಆಯ್ತಂತೆ ಅದೂ ಸಿದ್ಧಾರ್ಥ್ ಮಲ್ಹೋತ್ರ ಜೊತೆ ?!

ಆಲಿಯ ಭಟ್ ಮದುವೆ  ಆಯ್ತಂತೆ ಅದೂ ಸಿದ್ಧಾರ್ಥ್ ಮಲ್ಹೋತ್ರ ಜೊತೆ ?!
, ಶುಕ್ರವಾರ, 8 ಮೇ 2015 (10:25 IST)
ಸಿನಿಮಾದ ನಟನೆಯ ವಿಷಯವಾಗಿರಲಿ ಅಥವಾ ಹಾಡಿನ ವಿಷಯದಲ್ಲಿ ಆಗಿರಲಿ ಆಲಿಯ ಭಟ್  ಸದಾ ಸುದ್ದಿಯಲ್ಲಿರುತ್ತಾಳೆ. ಆದರೆ ಇತ್ತೀಚಿಗೆ ಆಕೆ ಒಂದು ಸುದ್ದಿ ಮೂಲಕ ಹೆಚ್ಚು ಗಮನ ಸೆಳೆದಳು. ವಿಷಯ ಏನೆಂದರೆ ಹಲವಾರು ವೆಬ್ ಸೈಟ್ ಗಳು ಆಕೆಯ ಮದುವೆಯ ಫೋಟೋವನ್ನು ಜಗತ್ತಿನ ಮುಂದೆ ತಂದಿಟ್ಟಿತು. ಮದುವೆ ಉಡುಗೆ ಧರಿಸಿ ತನ್ನ ಸಹ ನಟನಾದ ಸಿದ್ಧಾರ್ಥ್ ಮಲ್ಹೋತ್ರ ಅವರ ಜೊತೆ ಕಾರ್ ನಲ್ಲಿ ಹೋಗುತ್ತಿರುವ ಫೋಟೋವನ್ನು ಕಂಡು ಆಕೆಯ ಅಭಿಮಾನಿಗಳು ಆಶ್ಚರ್ಯ ಚಕಿತರಾದರು.
ಇವರಿಬ್ಬರ ನಡುವೆ ಕುಚ್ ಕುಚ್ ಇದೆ ಎನ್ನುವ ವದಂತಿಗಳಿವೆ. ಅದಕ್ಕೆ ಪುಷ್ಟಿ ಕೊಟ್ಟಂತೆ ಇತ್ತು ಆ ಫೋಟೋ. ಇವರಿಬ್ಬರೂ ಮದುವೆ ಆಗೇ ಹೋದ್ರ ಎನ್ನುವ ಸಂದೇಹ ಕಾಡಿದ್ದು ಸುಳ್ಳಲ್ಲ !ಆದರೆ ಅದು ನಿಜವಾದ ಮದುವೆ ಫೋಟೋ ಅಲ್ಲ, ಕೋಕೋ ಕೋಲಾ ಆಡ್ ನ ಶಾಟ್ ಎನ್ನುವ ಸತ್ಯ ಗೊತ್ತಾದ ತಕ್ಷಣ ನೆಮ್ಮದಿಯ ನಿಟ್ಟಿಸಿರು ಬಿಟ್ಟರಂತೆ ಆಕೆಯ ಅಭಿಮಾನಿಗಳು. 

Share this Story:

Follow Webdunia kannada