Select Your Language

Notifications

webdunia
webdunia
webdunia
webdunia

ಶಾಲೆಯನ್ನು ದತ್ತು ಪಡೆದ ನಟಿ ಪ್ರಣೀತಾ

ಶಾಲೆಯನ್ನು ದತ್ತು ಪಡೆದ ನಟಿ ಪ್ರಣೀತಾ
ಬೆಂಗಳೂರು , ಬುಧವಾರ, 17 ಅಕ್ಟೋಬರ್ 2018 (13:03 IST)
ಬೆಂಗಳೂರು : ಇತ್ತೀಚೆಗೆ ಸಿನಿಮಾ ತಾರೆಯರು ಕೂಡ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಇದೀಗ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಕೂಡ ಶಾಲೆಯೊಂದನ್ನು ದತ್ತು ಪಡೆದು ಸಾಮಾಜಿಕ ಕಳಕಳಿ ಮರೆದಿದ್ದಾರೆ.




ಹೌದು. ಬೆಂಗಳೂರಿನಲ್ಲಿ ವಾಸವಿರುವ ನಟಿ ಪ್ರಣೀತಾ ಅವರ ಹುಟ್ಟೂರು ಹಾಸನ ಸಮೀಪದ ಆಲೂರು. ಇದೀಗ ಅವರು ಹುಟ್ಟೂರಿನ ಮೇಲಿನ ಪ್ರೀತಿಯಿಂದ ಅಲ್ಲಿನ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ.


ಅಲ್ಲದೇ  ಆ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು 5 ಲಕ್ಷ ಕೂಡ ನೀಡಿದ್ದಾರೆ. ದತ್ತು ಪಡೆದ ಶಾಲೆಗೆ ಆಗಾಗ ಭೇಟಿ ನೀಡುವುದರ ಮೂಲಕ ತನ್ನ ಹುಟ್ಟೂರಿಗೂ ಹೋಗುವ ಅವಕಾಶ ಸಿಕ್ಕಂತಾಗಿದೆ ಈ ನಟಿಗೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋರಿ ಮೇಲೆ ಲಗೋರಿ’ ಸಿನಿಮಾ ನಿರ್ದೇಶಕರಿಂದ ಯುವ ನಟಿಗೆ ಲೈಂಗಿಕ ಕಿರುಕುಳ