Select Your Language

Notifications

webdunia
webdunia
webdunia
webdunia

ನಟಿ ಪಾರ್ವತಿ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ನಟಿ

ನಟಿ ಪಾರ್ವತಿ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ನಟಿ
ಬೆಂಗಳೂರು , ಶುಕ್ರವಾರ, 11 ಮೇ 2018 (13:36 IST)
ಪುನೀತ್ ರಾಜ್ ಕುಮಾರ್ ಅಭಿನಯದ  ‘ಮಿಲನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮಲಯಾಳಂನ ನಟಿ ಪಾರ್ವತಿ ಅವರು ಪ್ರಯಾಣಿಸುತ್ತಿರುವ ಕಾರು ರಸ್ತೆ ಅಪಘಾತಕ್ಕೊಳಗಾಗಿದೆ ಎಂಬುದಾಗಿ ತಿಳಿದುಬಂದಿದೆ.
ಕೊಚ್ಚಿಯಿಂದ ತ್ರಿವೇಂಡ್ರಂಗೆ ಒಂದು ಬಾಡಿಗೆ ಇನ್ನೋವಾದಲ್ಲಿ ನಟಿ ಪಾರ್ವತಿ ಅವರು ಪ್ರಯಾಣಿಸುತ್ತಿರುವಾಗ ಇನ್ನೊಂದು ಕಾರು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. 
 
ಅದೃಷ್ಟವಶಾತ್ ಈ ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಟಿ ಪಾರ್ವತಿ ಅವರು ಯಾವುದೇ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದ ಬಗ್ಗೆ ಎರಡೂ ಕಡೆಯವರಿಗೆ ರಾಜಿಯಾಗದ ಕಾರಣದಿಂದ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನದ ಬಗ್ಗೆ ಅರಿವು ಮೂಡಿಸಿದ ನಟಿ ಪ್ರಿಯಾಮಣಿ