ಕನ್ನಡ ಸಿನಿಮಾ ರಂಗಕ್ಕೆ ನಿವೃತ್ತಿ ಘೋಷಣೆ ಮಾಡಲಿದ್ದಾರಾ ನಟ ಚೇತನ್

ಶನಿವಾರ, 27 ಅಕ್ಟೋಬರ್ 2018 (07:41 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚೇತನ್ ಅವರು ಕನ್ನಡ ಸಿನಿಮಾ ರಂಗಕ್ಕೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಂದೆ ತಾಯಿ  ಜೊತೆ ಅಮೇರಿಕಾದಲ್ಲಿ ನೆಲೆಸಿದ್ದ ನಟ ಚೇತನ್ ಕರ್ನಾಟಕಕ್ಕೆ ಬಂದು  ‘ಆ ದಿನಗಳು’ ಸಿನಿಮಾದಲ್ಲಿ ನಟಿಸುವುದರ  ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.  ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ ನಟ ಚೇತನ್ ಅವರು ನಂತರ ಸಂಘಟನೆಗಳ ಮೂಲಕ ತಮ್ಮನ್ನು ಹೆಚ್ಚು ಗುರುತಿಸಿಕೊಂಡಿದ್ದರು.


ಇದೀಗ ಶ್ರುತಿ ಹರಿಹರನ್ ಅವರ ಮೀಟೂ ಆರೋಪಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಚೇತನ್ ವಿರುದ್ದ ಆಕ್ರೋಶಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಚೇತನ್ ತಂದೆ ತಾಯಿ ಕೂಡಲೇ ವಾಪಸ್ಸು ಆಮೇರಿಕಾಕ್ಕೆ ವಾಪಾಸ್ಸಾಗುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಮತ್ತೊಮ್ಮೆ ಶೃತಿ- ಸರ್ಜಾ ಸಂಧಾನ ಸಭೆ ನಡೆಸಲ್ಲ ಎಂದ ಫಿಲ್ಮ ಚೇಂಬರ್