ರೆಪೋ ದರದ ಆಧಾರದ ಮೇಲೆ ಸಾಲ ಒದಗಿಸಲು ಬ್ಯಾಂಕುಗಳಿಗೆ ಸೂಚನೆ ನೀಡಿದ ಆರ್ ಬಿ ಐ

ಗುರುವಾರ, 6 ಡಿಸೆಂಬರ್ 2018 (11:11 IST)
ನವದೆಹಲಿ : ಬ್ಯಾಂಕುಗಳು ತಮಗಿಷ್ಟ ಬಂದಂತೆ ಸಾಲ ನೀಡುವುದು ಹಾಗೂ ಬಡ್ಡಿದರ ವಿಧಿಸುವುದಕ್ಕೆ ಕಡಿವಾಣ ಹಾಕಲು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ.


ಈ ಮೂಲಕ ಆರ್.ಬಿ.ಐ. ಎಂಸಿಎಲ್‌ಆರ್, ಬೇಸ್ ರೇಟ್, ಪಿಎಲ್‌ಆರ್ ಮತ್ತು ಬಿಪಿಎಲ್‌ಆರ್ ಅಡಿಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ರದ್ದು ಮಾಡಿದೆ. ಆದ್ದರಿಂದ  2019 ಏಪ್ರಿಲ್ 1 ರ ನಂತರ ಬ್ಯಾಂಕುಗಳು ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ನೀಡುವ ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.


ಹಾಗೇ ಎಂಎಸ್‌ಎಂಇ ಸಾಲ ನೀಡುವ ವ್ಯವಸ್ಥೆ ಬದಲಾಗುತ್ತಿದೆ. ಇನ್ಮುಂದೆ ಬ್ಯಾಂಕ್ ಗಳು ಆರ್ಬಿಐನ ರೆಪೋ ದರದ ಆಧಾರದ ಮೇಲೆ ಸಾಲ ಒದಗಿಸಬೇಕಾಗುತ್ತದೆ. ತಮಗಿಷ್ಟ ಬಂದಂತೆ ಸಾಲ ನೀಡುವುದಾಗಲಿ, ಬಡ್ಡಿದರ ವಿಧಿಸುವುದಾಗಲಿ ಮಾಡುವಂತಿಲ್ಲ ಎಂದು ಆರ್.ಬಿ.ಐ. ಸೂಚಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING