Select Your Language

Notifications

webdunia
webdunia
webdunia
webdunia

ರತನ್‌ ಟಾಟಾ ಕನಸಿನ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟ ಬಂದ್. ಕಾರಣವೇನು ಗೊತ್ತಾ?

ರತನ್‌ ಟಾಟಾ ಕನಸಿನ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟ ಬಂದ್. ಕಾರಣವೇನು ಗೊತ್ತಾ?
ನವದೆಹಲಿ , ಶನಿವಾರ, 26 ಜನವರಿ 2019 (07:16 IST)
ನವದೆಹಲಿ : ರತನ್‌ ಟಾಟಾ ಅವರ ಕನಸಿನ ಕಾರಾದ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟವನ್ನು 2020ರ ಎಪ್ರಿಲ್‌ನಿಂದ ನಿಲ್ಲಿಸಲಾಗುವುದು ಎಂದು ಟಾಟಾ ಮೋಟರ್ಸ್‌ ಕಂಪೆನಿ ಹೇಳಿದೆ.

ವಾಹನ ಸವಾರರ ಕಾರಿನ ಕನಸು ಈಡೇರಿಸುವ ಉದ್ದೇಶಕ್ಕೆ ರತನ್ ಟಾಟಾ ಕೇವಲ 1 ಲಕ್ಷ ರೂಪಾಯಿಗೆ ಈ ಕಾರನ್ನು 2009 ರಲ್ಲಿ ಭಾರತದ ಮಾರುಕಟ್ಟೆಗೆ ತಂದಿದ್ದರು. ಆದರೆ ಈ ವರ್ಷ ಜನವರಿಯಿಂದ ಕೆಲವೊಂದು ಸುರಕ್ಷಾ ಕ್ರಮಗಳು ಜಾರಿಗೆ ಬಂದಿವೆ. ಎಪ್ರಿಲ್‌ನಲ್ಲಿ ಪುನಃ ಇನ್ನಷ್ಟು ಕ್ರಮಗಳು ಜಾರಿಗೆ ಬರಲಿವೆ. ಅಕ್ಟೋಬರ್‌ನಿಂದ ಮತ್ತೆ ಹೊಸ ಸುರಕ್ಷಾ ಕ್ರಮಗಳು ಜಾರಿಗೆ ಬರಲಿವೆ. 2020ರ ಎಪ್ರಿಲ್‌ 1ರಿಂದ ಬಿಎಸ್‌-6 ಸಂಪೂರ್ಣವಾಗಿ ಜಾರಿಗೆ ಬರಲಿದೆ.

 

ಇದರಿಂದ ಎಲ್ಲ ಕಾರುಗಳ ನವೀಕರಣ ಸಾಧ್ಯವಿಲ್ಲ. ಇದಕ್ಕೆ ಅನುಗುಣವಾದ ಉತ್ಪನ್ನ ತರಲು ದೊಡ್ಡ ಮಟ್ಟದ ಹೂಡಿಕೆ ಅಗತ್ಯ ಇರುತ್ತದೆ. ಆದರೆ ಕಂಪೆನಿ ನ್ಯಾನೋ ಸುಧಾರಣೆಗಾಗಿ ಹಣ ಹೂಡುವ ಯಾವುದೇ ಯೋಜನೆ ಹೊಂದಿಲ್ಲ. ಆದ್ದರಿಂದ 2020 ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ರದ್ದಾಗಲಿದೆ ಎಂದು ಕಂಪೆನಿ ಹೇಳಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

2ನೇ ತರಗತಿ ಬಾಲಕಿಯ ಮೇಲೆ ಶಾಲಾ ಮುಖ್ಯೋಪಾಧ್ಯಾಯನಿಂದ ಅತ್ಯಾಚಾರ