Select Your Language

Notifications

webdunia
webdunia
webdunia
webdunia

ರೈಲ್ವೆ ಬಜೆಟ್: ಕ್ಷಣ, ಕ್ಷಣದ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ರೈಲ್ವೆ ಬಜೆಟ್: ಕ್ಷಣ, ಕ್ಷಣದ ಮಾಹಿತಿಗಳಿಗೆ ಇಲ್ಲಿ ಕ್ಲಿಕ್ಕಿಸಿ
ನವದೆಹಲಿ , ಗುರುವಾರ, 26 ಫೆಬ್ರವರಿ 2015 (11:36 IST)
ನವದೆಹಲಿ: ರೈಲ್ವೆ ಸಚಿವ ಸುರೇಶ್ ಪ್ರಭು ಇಂದು ಮಧ್ಯಾಹ್ನ 12 ಗಂಟೆಗೆ ರೈಲ್ವೆ ಬಜೆಟ್ ಮಂಡನೆ ಸಲುವಾಗಿ ತಮ್ಮ ನಿವಾಸದಿಂದ ಹೊರಟಿದ್ದು, ಸಂಸತ್ ಭವನಕ್ಕೆ ಆಗಮಿಸಿದ್ದಾರೆ. ಇಂದು 2015-16ನೇ ಸಾಲಿನ ಚೊಚ್ಚಲ ರೈಲ್ವೆ ಬಜೆಟ್ ಸುರೇಶ್ ಪ್ರಭು ಮಂಡಿಸಲಿದ್ದು, ಹಿಂದಿನ ಯೋಜನೆಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.



ರೈಲ್ವೆ ಸಚಿವ ಸುರೇಶ್ ಪ್ರಭು 2015-16ನೇ ಸಾಲಿನ ರೈಲ್ವೆ ಬಜೆಟ್  ಮಂಡನೆ ಮಾಡಿದರು.  ಬಜೆಟ್ ಮಂಡಿಸಲು ಅವಕಾಶ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ಸೂಚಿಸಿದರು. ದೇಶದ ಜನರ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದರು.

ಸ್ವತಂತ್ರ ಸಿಕ್ಕು 6 ದಶಕಗಳು ಕಳೆದರೂ ರೈಲ್ವೆಯಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ  ಕಂಡುಬಂದಿಲ್ಲ  ಎಂದು ಸುರೇಶ್ ಪ್ರಭು ತಿಳಿಸಿದರು.  ಗೂಡ್ಸ್ ರೈಲುಗಳು ಸೇರಿದಂತೆ ಸಾಮಾನ್ಯ ರೈಲುಗಳು ಗಂಟೆಗೆ 25 ಕಿಮೀಗಿಂತ ಹೆಚ್ಚು ವೇಗದಲ್ಲಿ ಸಂಚರಿಸಲು ಸಾಧ್ಯವಾಗ್ತಿಲ್ಲ ಎಂದು ಸಚವರು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಭಾರೀ ಸುಧಾರಣೆ ಕಾಣಲಿದೆ ಎಂದು ಭರವಸೆ ನೀಡಿದರು. 

ಈಗ ಭಾರತೀಯ ರೈಲುಗಳಲ್ಲಿ 2.1 ಕೋಟಿ ಜನರು ಪ್ರಯಾಣಿಸುತ್ತಾರೆ. ಇದನ್ನು 3 ಕೋಟಿಗೆ ಹೆಚ್ಚಿಸುವುದು ನಮ್ಮ ಗುರಿಯಾಗಿದೆ. 

ಮುಂದಿನ ಐದು ವರ್ಷಗಳಲ್ಲಿ ರೈಲುಗಳ ಸಾಮರ್ಥ್ಯ, ವೇಗ ಹೆಚ್ಚಿಸುತ್ತೇವೆ.  ರೈಲಿನಲ್ಲಿ ಸಕಲ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ರೈಲ್ವೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.  ರೈಲಿನ ಟೈಂಟೇಬಲ್‌ನಲ್ಲಿ ಬದಲಾವಣೆ ತರಲಾಗುತ್ತದೆ. ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ ಜಾರಿಯಾಗಲಿದೆ. ಆದಾಯ ತರುವಂತಹ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಸಚಿವರು ಹೇಳಿದರು. 

 ರೈಲ್ವೆ ಬಜೆಟ್ ಮಂಡನೆಯ ಮುಖ್ಯಾಂಶಗಳು ಕೆಳಗಿವೆ: 
  •  ಪ್ಯಾಸೆಂಜರ್   ರೈಲ್ವೆ ಪ್ರಯಾಣ ದರದಲ್ಲಿ  ಯಾವುದೇ ರೀತಿ  ಏರಿಕೆ ಇಲ್ಲ.
  •  ರೈಲ್ವೆ ನಿಲ್ದಾಣಗಳ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುವುದು. 
  • 5 ವರ್ಷಗಳಲ್ಲಿ ರೈಲ್ವೆಯಲ್ಲಿ 8.5 ಲಕ್ಷ ಕೋಟಿ ರೂ. ಹೂಡಿಕೆ
  • ರೈಲ್ವೆಯ ಆಡಳಿತದಲ್ಲಿ ಪಾರದರ್ಶಕತೆ ತರಲಾಗುವುದು. 
 
  • 17 ಸಾವಿರ ಜೈವಿಕ ಶೌಚಾಲಯಗಳ ನಿರ್ಮಾಣ .
  •  ಹಲವು ನಿಲ್ದಾಣಗಳಲ್ಲಿ ಆಟೋಮೇಟಿಕ್ ಟಿಕೆಟ್ ವಿತರಣೆ 
  • ಸರಕು ಸಾಗಣೆ ರೈಲ್ವೆಗಳಿಗೆ ವೇಳಾಪಟ್ಟಿ ನಿಗದಿ
  • ಎಲ್ಲಾ ರೀತಿಯ ಪ್ರಯಾಣಿಕರಿಗೆ ಆನ್‌ಲೈನ್ ಬುಕಿಂಗ್ 
  •  
  • .ದೇಶದ 650 ರೈಲ್ವೆ ನಿಲ್ದಾಣಗಳಲ್ಲಿ ಶೌಚಾಲಯಗಳ ನಿರ್ಮಾಣ
  •  ದರ ಹೆಚ್ಚಳ ಮಾಡದಿದ್ದರೂ ಉತ್ತಮ ಸೇವೆಗೆ ಒತ್ತು
  •  ಟಿಕೆಟ್ ರಹಿತ ಪ್ರಯಾಣಿಕರಿಗೆ ರೈಲಿನಲ್ಲೇ ಟಿಕೆಟ್ ವಿತರಣೆ
  • ಉತ್ತಮ ಗುಣಮಟ್ಟದ ಆಹಾರ ನೀಡಲು ಕ್ರಮ.
  • . ಮಹಿಳೆಯರ ಭದ್ರತೆಗಾಗಿ ನಿರ್ಭಯ ಫಂಡ್ ಸ್ಥಾಪನೆ 
  • ಅಂಧರಿಗಾಗಿ ವಿಶೇಷ ಬೋಗಿಗಳ ವ್ಯವಸ್ಥೆ
  •  
  •  ಬೆಂಗಳೂರು ಸ್ಟೇಷನ್ ಅಭಿವೃದ್ಧಿಗೆ 2 ಕೋಟಿ ರೂ.  ಪಿ.ಸಿ. ಮೋಹನ್ ಸಂಸದರ ನಿಧಿಯಿಂದ ಘೋಷಣೆ
  •  ಮಹಿಳಾ ಬೋಗಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ
  • 108ರೈಲುಗಳಲ್ಲಿ ಇ-ಕ್ಯಾಟರಿಂಗ್ ವ್ಯವಸ್ಥೆ ಜಾರಿ
  • ಬುಲೆಟ್ ಟ್ರೈನ್‌ಗಳ ಮಾದರಿಯಲ್ಲಿ ಹೊಸ ಕೋಚ್‌ಗಳ ನಿರ್ಮಾಣ 
  • ಮೇಲಿನ ಆಸನಕ್ಕೆ ಹತ್ತಲು ಸುಲಭ ವ್ಯವಸ್ಥೆ
  • ನಾಲ್ಕು ತಿಂಗಳು ಮುಂಚಿತವಾಗಿ ಮುಂಗಡ ಬುಕಿಂಗ್‌ ಸೌಲಭ್ಯ
  •  ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ 
  •  
  •  ವೃದ್ಧರು, ಗರ್ಭಿಣಿಯರಿಗೆ ಕೆಳಗಿನ ಆಸನ ವ್ಯವಸ್ಥೆ
  • ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಲಾಕರ್ ವ್ಯವಸ್ಥೆ
  • ಬೋಗಿಗಳಲ್ಲಿ ಮೊಬೈಲ್ ಚಾರ್ಜ್‌ಗೆ ವ್ಯವಸ್ಥೆ
  • ಪ್ರಯಾಣ ಅವಧಿ ಇಳಿಕೆಗೆ ಸಕಲ ರೀತಿಯಲ್ಲಿ ಕ್ರಮ
  • ದೆಹಲಿ-ಅರುಣಾಚಲ ಪ್ರದೇಶ-ಮೇಘಾಲಯಕ್ಕೆ ರೈಲು ಸಂಪರ್ಕ
  • ದೇಶದ 77 ರೈಲ್ವೆ ಯೋಜನೆಗಳ ವಿಸ್ತರಣೆ
  • 400 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಘೋಷಣೆ
  • ಹಾಲಿ ರೈಲ್ವೆ ಮಾರ್ಗಗಳಲ್ಲಿ ಹೊಸ ಬುಲೆಟ್ ರೈಲು ಸಂಚಾರ 
  •  
  • ರೈಲ್ವೆಗಳಲ್ಲಿ ವ್ಯಾಕ್ಯೂಮ್ ಟಾಯ್ಲೆಟ್  ಅಳವಡಿಕೆ 
  • ಮಹಾನಗರಗಳಲ್ಲಿ ಸ್ಯಾಟಲೈಟ್ ರೈಲು 
  • ರೈಲು ಸಂಚಾರ ವೇಗದ ಹೆಚ್ಚಳಕ್ಕೆ ಕ್ರಮ 
  • ಮುಂಬೈ-ಅಹ್ಮದಾಬಾದ್ ಮಧ್ಯೆ ಹೈ ಸ್ಪೀಡ್ ರೈಲು
  • ಮಹಾನಗರಗಳಲ್ಲಿ ಸ್ಯಾಟಲೈಟ್ ರೈಲು 
  • ಕಾರಿಡಾರ್‌ಗಳ ವೇಗ 160 ಕಿಮೀಗೆ ವಿಸ್ತರಣೆ
  • ರೈಲ್ವೆಯಲ್ಲಿ ಉದ್ಯೋಗ ಹೆಚ್ಚಳಕ್ಕೆ ಆದ್ಯತೆ
  • ರೇಡಿಯೋ ಆಧಾರಿತ ಸಿಗ್ನಲ್ ವ್ಯವಸ್ಥೆ
  •  
  •  ಅತ್ಯಾಧುನಿಕ ಸೌಲಭ್ಯದ ರೈಲು ಇನ್ನೆರಡು ವರ್ಷಗಳಲ್ಲಿ ಓಡಲಿದೆ. 
  • ನೌಕರರು ಸೇವಾನಿರತರಾಗಿದ್ದಾಗ ಮೃತಪಟ್ಟರೆ ಪರಿಹಾರ 
  • ಮುಂಬೈ ಕೊಲ್ಕತಾ ಚೆನ್ನೈನಲ್ಲಿ ರೈಲ್ವೆ ಲೈಫ್‌ಲೈನ್, ಲೈಫ್ ಲೈನ್ ಮೂಲಕ ರೈಲ್ವೆ ಸಂಚಾರದ ಮೇಲೆ ಕಣ್ಗಾವಲು.
  • ರೈಲು ವೇಗ ಗಂಟೆಗೆ 160 ಕಿಮೀನಿಂದ  200 ಕಿಮೀಗೆ ಏರಿಕೆ .
  • ಡೆಬಿಟ್ ಕಾರ್ಡ್ ಮೂಲಕ ಟಿಕೆಟ್ ಸೌಲಭ್ಯ 
  •  
  • ದೂರು ನೀಡಲು ವಿಶೇಷ ಆಪ್ ನಿರ್ಮಾಣ 
  •  4 ನಗರಗಳಲ್ಲಿ ರೈಲ್ವೆ ಸಂಶೋಧನಾ ಕೇಂದ್ರಗಳ ಸ್ಥಾಪನೆ
  • ಸಂಸದರ ನಿಧಿಯಿಂದ ರೈಲ್ವೆ ಮೂಲ ಸೌಕರ್ಯಕ್ಕೆ ಕೊಡುಗೆ
  • ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ
  • ಬೋಗಿಗಳಲ್ಲಿ ವಾರ್ನಿಂಗ್ ಸಿಸ್ಟಮ್ ಅಳವಡಿಕೆ
  • ಕರಾವಳಿ ಸಂಪರ್ಕ ಜಾಲಕ್ಕೆ 2000 ಕೋಟಿ ರೂ. ವೆಚ್ಚ
  •  



 

Share this Story:

Follow Webdunia kannada