Select Your Language

Notifications

webdunia
webdunia
webdunia
webdunia

ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ

ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ
ನವದೆಹಲಿ , ಭಾನುವಾರ, 30 ಸೆಪ್ಟಂಬರ್ 2018 (15:04 IST)
ನವದೆಹಲಿ : ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ. ಯಾಕೆಂದರೆ ಪ್ರಯಾಣಿಕರು ಪೊಲೀಸ್ ಗೆ ದೂರು ಕೊಟ್ಟರೆ ಡ್ರೈವರ್ ಗಳು ತಮ್ಮ ತಪ್ಪಿಗೆ 25 ಸಾವಿರದಿಂದ 1 ಲಕ್ಷ ರೂ.ವರೆಗೆ ದಂಡ ತೆರಬೇಕಾಗುತ್ತದೆ.


ಹೌದು. ಆಪ್ ಆಧಾರಿತ ಸೇವೆಗಳಲ್ಲೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿರುವ ದೆಹಲಿ ಸರ್ಕಾರ, ಇಂತಹ ಕಾನೂನನ್ನು ತರಲು ನಿರ್ಧರಿಸಿದೆ. ಸಚಿವರ ನೇತೃತ್ವದ ಆಯೋಗ ಈ ಬಗ್ಗೆ ತಿಳಿಸಿದ್ದು `ಲೈಸೆನ್ಸಿಂಗ್ ಆಂಡ್ ರೆಗ್ಯುಲೇಶನ್ ಆಫ್ ಆಪ್ ಬೇಸ್ಡ್ ಎಗ್ರಿಗೇಟರ್ಸ್ ರೂಲ್ಸ್ 2017' ಮತ್ತು ಸಿಟಿ ಟ್ಯಾಕ್ಸಿ ಸ್ಕೀಂ 2017 ಅನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.


ಈ ನೀತಿ ಜಾರಿಗೆ ಬಂದ ಕೂಡಲೇ ಆಪ್ ಬೇಸ್ಡ್ ಕ್ಯಾಬ್ ಗಳನ್ನು ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಜೊತೆಗೆ ಸಾರಿಗೆ ಇಲಾಖೆಯ ಗ್ರಾಹಕ ಸೇವಾ ಕೇಂದ್ರದ ಜೊತೆ ಸಂಪರ್ಕ ಸಾಧಿಸುವ ಜಿಪಿಎಸ್ ಅನ್ನೂ ಅಳವಡಿಸಬೇಕಾಗುತ್ತದೆ. ಹೀಗಾಗಿ ಡ್ರೈವರ್ ಎಲ್ಲೇ ಹೋದರೂ ಸಾರಿಗೆ ಇಲಾಖೆ ನಿಗಾದಲ್ಲೇ ಇರುತ್ತಾನೆ. ಹೀಗಾಗಿ ಆಪ್ ಕಂಪನಿಗಳೂ ತನ್ನ ಚಾಲಕನನ್ನು ರಕ್ಷಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

‘ಹೌದು ನಾನೇ ಟ್ರಬಲ್ ಶೂಟರ್’ ಎಂದ ಸಿದ್ದರಾಮಯ್ಯ