ದಸರಾ ಪ್ರಯುಕ್ತ ನಾಳೆಯಿಂದ ಎಸ್.ಬಿ.ಐ. ನ YONO ಆಪ್ ನಿಂದ ಖರೀದಿ ಮಾಡುವವರಿಗೆ ಭರ್ಜರಿ ಆಫರ್

ಸೋಮವಾರ, 15 ಅಕ್ಟೋಬರ್ 2018 (15:41 IST)
ಬೆಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ YONO ಆಪ್ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ ಭರ್ಜರಿ ಆಫರ್ ವೊಂದನ್ನು ನೀಡಿದೆ.


ಹೌದು ಅಕ್ಟೋಬರ್ 16 ರಿಂದ 21 ರವರೆಗೆ ಎಸ್.ಬಿ.ಐ. ನ YONO ಆಪ್ ಮೂಲಕ ಖರೀದಿ ಮಾಡುವವರಿಗೆ ಶೇಕಡಾ 10ರಷ್ಟು ರಿಯಾಯಿತಿ ಜೊತೆಗೆ ಕ್ಯಾಶ್ ಬ್ಯಾಕ್ ಕೂಡಾ ಸಿಗಲಿದೆಯಂತೆ. ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್, ಜಬಾಂಗ್, ಮಿಂತ್ರಾ, ಯಾತ್ರಾ ಸೇರಿದಂತೆ ಹಲವು ಕಂಪನಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಈಗ ಡಿಜಿಟಲ್ ಪಾವತಿ ಫ್ಲಾಟ್ ಫಾರಂ YONO ಮೂಲಕ ಹಣ ಪಾವತಿಸಿದರೆ ರಿಯಾಯಿತಿ ಜೊತೆಗೆ ಕ್ಯಾಶ್ ಬ್ಯಾಕ್ ಕೂಡ ನೀಡುತ್ತಿದೆಯಂತೆ.


ಎಸ್.ಬಿ.ಐ. ನ YONO ಆಪ್ ಆಂಡ್ರಾಯ್ಡ್ ಹಾಗೂ ಐಒಎಸ್ ಫೋನ್ ಗಳಲ್ಲಿ ಲಭ್ಯವಿದ್ದು, ಈಗಾಗಲೇ ಇದನ್ನು ಮೂರು ಮಿಲಿಯನ್ ಗ್ರಾಹಕರು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರತಿನಿತ್ಯ 25 ಸಾವಿರ ಮಂದಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆಂದು ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING