Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯ ನಿಯಂತ್ರಿಸಲು ನೆಸ್ಲೆ ಕಂಪೆನಿಯಿಂದ ಗ್ರಾಹಕರಿಗೆ ಹೊಸ ಆಫರ್

ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯ ನಿಯಂತ್ರಿಸಲು ನೆಸ್ಲೆ ಕಂಪೆನಿಯಿಂದ ಗ್ರಾಹಕರಿಗೆ ಹೊಸ ಆಫರ್
ನವದೆಹಲಿ , ಶುಕ್ರವಾರ, 16 ನವೆಂಬರ್ 2018 (14:51 IST)
ನವದೆಹಲಿ : ಉತ್ತರಾಖಂಡ್‌ನಲ್ಲಿ ಪ್ಲಾಸ್ಟಿಕ್ ನಿಂದಾಗುವ  ಮಾಲಿನ್ಯ ನಿಯಂತ್ರಿಸುವ  ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಆಹಾರ ಕಂಪನಿ ನೆಸ್ಲೆ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸಿದೆ.

ಗ್ರಾಹಕರು 10 ಖಾಲಿ ಮ್ಯಾಗಿ ಪ್ಯಾಕೆಟ್‌ಗಳನ್ನು ವಾಪಸ್ ನೀಡಿದರೆ 1 ಮ್ಯಾಗಿ ಪ್ಯಾಕೆಟ್ ಉಚಿತವಾಗಿ ನೀಡಲಾಗುತ್ತದೆ ಎಂಬ ಆಫರ್ ಅನ್ನು ನೆಸ್ಲೆ ಪ್ರಕಟಿಸಿದೆ. ಉತ್ತರಾಖಂಡ್‌ ನ ಮಾಲಿನ್ಯ ನಿಯಂತ್ರಣಾ ಮಂಡಳಿ ನಡೆಸಿದ ಅಧ್ಯಯನದಲ್ಲಿ ಉತ್ತರಾಖಂಡ್‌ನ ಪ್ರಸಿದ್ಧ ಗಿರಿಧಾಮಗಳಲ್ಲಿ ಮ್ಯಾಗಿ, ಪೆಪ್ಸಿಯ ಲೇಸ್ ಚಿಪ್ಸ್ ಹಾಗೂ ಪಾರ್ಲೆಯ ಫ್ರೂಟಿ ಪ್ಲಾಸ್ಟಿಕ್ ಗಳು ಮಾಲಿನ್ಯಕ್ಕೆ ಕಾರಣವಾಗುತ್ತಿರುವ  ಹಿನ್ನಲೆಯಲ್ಲಿ ಗ್ರಾಹಕರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿಯ ಜವಾಬ್ದಾರಿಯ ಕುರಿತು ಅರಿವು ಮೂಡಿಸಲು ನೆಸ್ಲೆ ಕಂಪೆನಿಯು ಈ ನಿರ್ಧಾರ ಕೈಗೊಂಡಿದೆ.

 

ಆದರೆ ಈ ಆಫರ್ ದೇಶಾದ್ಯಂತ ಲಭ್ಯವಿಲ್ಲ. ಬದಲಾಗಿ ಉತ್ತರಾಖಂಡ್‌ನ 2 ಸ್ಥಳಗಳಲ್ಲಿ ಅಂದರೆ, ಡೆಹ್ರಾಡೂನ್ ಹಾಗೂ ಮಸ್ಸೂರಿಗಳ 250 ರಿಟೈಲ್ ಮಳಿಗೆಗಳಲ್ಲಿ ಮಾತ್ರ ಜಾರಿಗೆ ತರಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಶಿಕ್ಷಕಿಯಿಂದ ಬೆತ್ತದಿಂದ ಹೊಡೆತ