Select Your Language

Notifications

webdunia
webdunia
webdunia
webdunia

ಜಿಯೋ ತನ್ನ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ ಈ ಹೊಸ ಆ್ಯಪ್

ಜಿಯೋ ತನ್ನ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ ಈ ಹೊಸ ಆ್ಯಪ್
ಬೆಂಗಳೂರು , ಗುರುವಾರ, 31 ಜನವರಿ 2019 (08:52 IST)
ಬೆಂಗಳೂರು : ತನ್ನ ಗ್ರಾಹಕರ ಅನುಕೂಲಕ್ಕಾಗಿ  ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿರುವ ಜಿಯೋ ಇದೀಗ ಮೊದಲ ಬಾರಿಗೆ ಜಿಯೋ ಫೋನ್ ಬಳಕೆದಾರರಿಗೆ ದೊಡ್ಡ ಮಟ್ಟದ ಸೌಲಭ್ಯಯೊಂದನ್ನು ಒದಗಿಸಿಕೊಟ್ಟಿದೆ.

ಹೌದು. ಜಿಯೋ ಪೋನ್ ಬಳಕೆದಾರರಿಗಾಗಿ IRCTC ಟಿಕೆಟ್ ಬುಕಿಂಗ್ ಆಯ್ಕೆಯನ್ನು ನೀಡಲು ಮುಂದಾಗಿದೆ. ಅದಕ್ಕಾಗಿ ಜಿಯೋ ರೈಲ್ ಎನ್ನುವ ಹೊಸ ಆಯಪ್ ವೊಂದನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಜಿಯೋ ಆಯಪ್ ಸ್ಟೋರ್ ನಲ್ಲಿ ಲಭ್ಯವಿದ್ದು, ಬಳಕೆದಾರರು ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ IRCTC ಆಕೌಂಟ್ ಇಲ್ಲದೆ ಇರುವವರು ಸಹ ಈ ಆಯಪ್ ಮೂಲಕ ಅಕೌಂಟ್ ಕ್ರಿಯೆಟ್ ಮಾಡಿ ಟಿಕೆಟ್ ಬುಕ್ ಮಾಡಬಹುದಾಗಿದೆ.

 

ಅಲ್ಲದೇ ಈ ಆಯಪ್ ಮೂಲಕ ಜಿಯೋ ಫೋನ್ ಬಳಕೆದಾರರು PNR ಸ್ಟೇಟಸ್ ಸಹ ನೋಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಆಯಪ್ ಮೂಲಕ ಟಿಕೆಟ್ ಬುಕ್ ಮಾಡಿ, ಅದರ ಸ್ಥಿತಿಗತಿಯನ್ನು ಇದರಲ್ಲಿ ನೋಡಬಹುದಾಗಿದೆ. ರೈಲು ಎಲ್ಲಿದೇ ಎಂದು ನೋಡುವ ಅವಕಾಶವು ಇದ್ದು, ಊಟ, ತಿಂಡಿಯನ್ನು ಸಹ ಆಯಪ್ ನಲ್ಲಿಯೇ ಆರ್ಡರ್ ಮಾಡಬಹುದಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಗ್ರೆಸ್ ನಾಯಕ ಪಕ್ಷದಿಂದ ಉಚ್ಛಾಟನೆ