Select Your Language

Notifications

webdunia
webdunia
webdunia
webdunia

ಗ್ರಾಹಕರಿಗೆ ಸಿಹಿ ಸುದ್ದಿ ; ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ

ಗ್ರಾಹಕರಿಗೆ ಸಿಹಿ ಸುದ್ದಿ ; ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ
ನವದೆಹಲಿ , ಭಾನುವಾರ, 29 ಜುಲೈ 2018 (10:14 IST)
ನವದೆಹಲಿ : ಕೇಂದ್ರ ಸರ್ಕಾರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ ಮಾಡಿದ್ದು, ಜಿಎಸ್ ಟಿ ಪರಿಷ್ಕೃತ ದರಗಳು ಶುಕ್ರವಾರದಿಂದ ಜಾರಿಗೆ ಬಂದಿವೆ.


ಫ್ರಿಡ್ಜ್, ಸಣ್ಣ ಪರದೆಯ ಟಿವಿ, ವಾಷಿಂಗ್ ಮೆಷಿನ್, ಫುಟ್ ವೇರ್ ಮತ್ತಿತರ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ ದರಗಳು ಕನಿಷ್ಠ 7 ರಿಂದ 10 ರಷ್ಟು ಕಡಿತವಾಗಿದೆ. ಎಲೆಕ್ಟ್ರಾನಿಕ್ಸ್‌ ವಲಯದ ಪ್ರಮುಖ ಕಂಪನಿಯಾದ ಸ್ಯಾಮ್‌ಸಂಗ್‌, ಟಿ.ವಿ, ಫ್ರಿಡ್ಜ್‌, ವಾಷಿಂಗ್‌ ಮಶೀನ್‌ ದರಗಳನ್ನು ಶೇ.8ರಷ್ಟು ಇಳಿಕೆ ಮಾಡಿದೆ. ಎಲ್ ಜಿ, ಕಂಪನಿ ಸಹ ವಾಷಿಂಗ್ ಮಶೀನ್, ವಾಕ್ಯೂಮ್ ಕ್ಲೀನರ್ ದರ ಇಳಿಸಿದೆ. ಆ ಮೂಲಕ ಜಿಎಸ್ ಟಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರುವುದಾಗಿ ಹೇಳಿದೆ.


ಗೃಹೋಪಯೋಗಿ ವಸ್ತುಗಳು, ಶೇ.28 ರ ಜಿ.ಎಸ್.ಟಿ. ಶ್ರೇಣಿಯಲ್ಲಿದ್ದು, ಜುಲೈ 21 ರಂದು ನಡೆದ ಜಿ.ಎಸ್.ಟಿ. ಸಭೆಯಲ್ಲಿ ಈ ದರವನ್ನು ಪರಿಷ್ಕರಿಸಿ ತೆರಿಗೆಯನ್ನು ಇಳಿಸಲಾಗಿತ್ತು. ಅದು ಜುಲೈ 27 ರಿಂದ ಜಾರಿಗೆ ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯಪ್ಪನ ಆಶೀರ್ವಾದದಿಂದ ಮುಖ್ಯಮಂತ್ರಿಯಾದೆ: ಸಿಎಂ ಕುಮಾರಸ್ವಾಮಿ