Select Your Language

Notifications

webdunia
webdunia
webdunia
webdunia

ಸಿಮ್ ಸ್ವಾಪ್‌ ವಂಚನೆ ಬಗ್ಗೆ ನಿಮಗೆ ಗೊತ್ತಾ?

ಸಿಮ್ ಸ್ವಾಪ್‌ ವಂಚನೆ ಬಗ್ಗೆ ನಿಮಗೆ ಗೊತ್ತಾ?
ಬೆಂಗಳೂರು , ಶುಕ್ರವಾರ, 17 ಆಗಸ್ಟ್ 2018 (19:23 IST)
ದಿನ ಕಳೆದಂತೆ ಸೌಲಭ್ಯಗಳು ಹೆಚ್ಚಾದಂತೆ ಸಮಸ್ಯೆಗಳೂ ಸಹ ಹೆಚ್ಚಾಗುತ್ತಲೇ ಇವೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯನ ಜೀವನಕ್ಕೆ ಎಷ್ಟು ವರವೋ ಅಷ್ಟೇ ಶಾಪವೂ ಹೌದು. ಇತ್ತೀಚಿನ ದಿನಗಳಲ್ಲಿ ಸಿಮ್ ಸ್ವಾಪ್ ವಂಚನೆಗಳು ಬಹಳಷ್ಟು ಕೇಳಿ ಬರುತ್ತಿವೆ. ಪ್ರತಿಷ್ಠಿತ ನಗರಗಳಲ್ಲಿ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಅನೇಕ ಜನರು ಹಣವನ್ನು ಕಳೆದುಕೊಂಡಿದ್ದಾರೆ ಎಂಬುದೂ ಸಹ ಶೋಚನೀಯ ವಿಷಯವೇ ಸರಿ. ಹಣವಂಚಕರಿಗೆ ಇದರಿಂದ ಸುಲಭವಾಗಿ ಹಣವನ್ನು ದೋಚಲು ಸಾಧ್ಯವಾಗುತ್ತದೆ
** ಏನಿದು ಸಿಮ್ ಸ್ವಾಪ್?
 
 ತುಂಬಾ ಸರಳವಾಗಿ ಈ ಸಿಮ್ ಸ್ವಾಪ್ ಅನ್ನು ವ್ಯಾಖ್ಯಾನಿಸಬೇಕು ಎಂದರೆ ನಿಮ್ಮ ಬಳಿ ಈಗಾಗಲೇ ಇರುವ ಫೋನ್ ನಂಬರನ್ನು ಹೊಸ ಸಿಮ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು. 
 
** ಜನರನ್ನು ಹೇಗೆ ಮೋಸಗೊಳಿಸುತ್ತಾರೆ?
 
 ಪ್ರತಿ ಸಿಮ್ ಕೂಡಾ 20 ಅಂಕಿಗಳುಳ್ಳ ವಿಶಿಷ್ಟ ನಂಬರ್ ಅನ್ನು ಹೊಂದಿರುತ್ತದೆ. ಈ ನಂಬರ್‌ನಿಂದ ನಿಮ್ಮ ಮೊಬೈಲ್ ಸಂಖ್ಯೆಯ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಬಹುದು.
 
* ವಂಚಕರು ಮೊದಲು ಏರ್‌ಟೆಲ್, ವೊಡಾಫೋನ್, ಜಿಯೋ, ಐಡಿಯಾ ಹೀಗೆ ಪ್ರತಿಷ್ಠಿತ ಕಂಪನಿಯ ಪ್ರತಿನಿಧಿಗಳೆಂದು ಹೇಳಿಕೊಂಡು ಕರೆ ಮಾಡುತ್ತಾರೆ.
* ನಂತರ ಕಾಲ್ ಡ್ರಾಪ್ ಪ್ರೊಬ್ಲೆಮ್ ಅಥವಾ ಸಿಗ್ನಲ್ ಪ್ರೊಬ್ಲೆಮ್ ಮಾಹಿತಿ ಪಡೆಯಲು ಕಾಲ್ ಮಾಡಿರುವುದಾಗಿ ಹೇಳುತ್ತಾರೆ. 
 
* ಜೊತೆಗೆ 4ಜಿ ಸಿಮ್ ಕಾರ್ಡ್‌ಗೆ ಬದಲಾಗಲು ಅಥವಾ ಮೊಬೈಲ್ ಇಂಟರ್ನೆಟ್ ಡೇಟಾ ಹೆಚ್ಚಿಸುತ್ತೇವೆ ಹೀಗೆ ಇನ್ನಿತರ ಭರವಸೆಗಳನ್ನು ಫೋನ್‌ನಲ್ಲಿಯೇ ನೀಡುತ್ತಾರೆ.
 
* ನಂತರ ಈ ಸಿಮ್ ನಂಬರನ್ನು ಬೇರೆ ಸಿಮ್ ಕಾರ್ಡ್‌ಗೆ ಹಾಕಿಕೊಡುವುದಾಗಿ ಹೇಳಿ ನಿಮ್ಮ ಸಿಮ್‌ನ ಹಿಂಭಾಗದಲ್ಲಿರುವ ವಿಶಿಷ್ಟವಾದ 20 ಅಂಕೆಗಳುಳ್ಳ ಸಂಖ್ಯೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ.
 
* ನಿಮ್ಮಿಂದ ಆ 20 ಅಂಕೆಯ ಸಂಖ್ಯೆಗಳನ್ನು ಪಡೆದ ವಂಚಕರು ನಿಮ್ಮದೇ ನಂಬರಿನ ಇನ್ನೊಂದು ಸಿಮ್ ಅನ್ನು ಪಡೆದುಕೊಂಡಿರುತ್ತಾರೆ. 
 
* ಒಮ್ಮೆ ಈ ಸಿಮ್ ಸ್ವಾಪ್ ಪ್ರಕ್ರಿಯೆಯು ಪೂರ್ಣಗೊಂಡರೆ ನಿಮ್ಮ ಬಳಿ ಇರುವ ಸಿಮ್ ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಮತ್ತು ಸಿಗ್ನಲ್ ಬರುವುದಿಲ್ಲ. ಆದರೆ ವಂಚಕರ ಬಳಿ ಇರುವ ನಿಮ್ಮದೇ ನಂಬರಿನ ಹೊಸ ಸಿಮ್‌ಗೆ ಪೂರ್ಣ ಪ್ರಮಾಣದ ಸಿಗ್ನಲ್ ಬರುತ್ತಿರುತ್ತದೆ.
 
* ಇದನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಬಳಸುವ ವಂಚಕರು ನಿಮ್ಮ ಬ್ಯಾಂಕ್‌ನ ವ್ಯವಹಾರಗಳನ್ನು ಅದಲ್ಲದೇ ಶಾಪಿಂಗ್ ಕೂಡಾ ಮಾಡಲು ಸಾಧ್ಯವಾಗುತ್ತದೆ. 
 
** ಮುನ್ನೆಚರಿಕೆ ವಹಿಸುವುದು ಹೇಗೆ?
 
* ಮೊದಲನೆಯದಾಗಿ ಅಪರಿಚಿತ ಕರೆಗಳನ್ನು ನಂಬಬೇಡಿ.
 
* ನಿಮ್ಮ ಸಿಮ್‌ನ ಹಿಂಭಾಗದಲ್ಲಿರುವ ವಿಶಿಷ್ಟವಾದ 20 ಅಂಕಿಗಳ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
 
* ನಿಮ್ಮ ಬ್ಯಾಂಕಿನ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಮತ್ತು ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
 
* ಸಿಮ್ ಸ್ವಾಪ್ ವಂಚಕರು ಹೆಚ್ಚಾಗಿ ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡುವುದರಿಂದ ಈ ರೀತಿಯ ಮಾಹಿತಿಗಳನ್ನು ಅವರಿಗೆ ಮೊದಲೇ ಹೇಳುವುದು ಉತ್ತಮ.
 
* ಈ ಸಿಮ್ ಸ್ವಾಪ್ ತೊಂದರೆಯು 3 ನೇ ವ್ಯಕ್ತಿಯಿಂದ ಮಾತ್ರ ಪ್ರಾರಂಭವಾಗಲು ಸಾಧ್ಯ. ಆದ್ದರಿಂದ ಏನೇ ತೊಂದರೆ ಆದರೆ ನೀವೆ ಖುದ್ದಾಗಿ ನಿಮ್ಮ ಸಿಮ್ ಕೇಂದ್ರಕ್ಕೆ ಹೋಗುವುದು ಉತ್ತಮ.
 
* ನಿಮ್ಮ ಆಧಾರ್ ಸಂಖ್ಯೆಯನ್ನು ಯಾರೊಂದಿಗೂ ಯಾವುದೇ ಕಾರಣಕ್ಕೂ ಹಂಚಿಕೊಳ್ಳದೇ ಇರುವುದು ಉತ್ತಮ. 
 
* ಮುಖ್ಯವಾಗಿ ಬ್ಯಾಂಕ್ ವ್ಯವಹಾರದ ಬಗ್ಗೆ ನಿಗಾ ಇರಲಿ. ಅಂದರೆ ಮೇಲಿಂದ ಮೇಲೆ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಬದಲಿಸುತ್ತಿರಬೇಕು. ಇದರಿಂದ ವಂಚಕರಿಗೆ ನಿಮ್ಮ ಖಾತೆಯನ್ನು ಸುಲಭವಾಗಿ ಹ್ಯಾಕ್ ಮಾಡಲು ಆಗುವುದಿಲ್ಲ.
 
ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಇಂತಹ ತೊಂದರೆಗಳಿಂದ ನಾವು ಸ್ವಲ್ಪಮಟ್ಟಿಗೆ ಪಾರಾಗಬಹುದು. ಹಿರಿಯ ನಾಗರಿಕರಿಗಿಂತ ಹೆಚ್ಚಾಗಿ ತಿಳಿದಿರುವ ಯುವ ಪೀಳಿಗೆಯೇ ಇಂತಹ ಜಾಲದಲ್ಲಿ ಸಿಲುಕುತ್ತಿರುವುದು ದುಃಖದ ವಿಷಯವಾಗಿದೆ. ಆದುದರಿಂದ ಇಂತಹ ಜಾಲಗಳ ಬಗ್ಗೆ ಏನೂ ತಿಳಿಯದಿರುವ ಹಿರಿಯರಿಗೆ ನಾವು ಮೊದಲೇ ಹೇಳಿದರೆ ಅವರೂ ಕೂಡಾ ಇದರಿಂದ ಪಾರಾಗಬಹುದು. 

Share this Story:

Follow Webdunia kannada

ಮುಂದಿನ ಸುದ್ದಿ

ಪಂಚಭೂತಗಳಲ್ಲಿ ವಿಲೀನರಾದ ಅಜಾತ ಶತ್ರು ವಾಜಪೇಯಿ