Select Your Language

Notifications

webdunia
webdunia
webdunia
webdunia

ಬಿಎಸ್‌ಎನ್‌ಎಲ್ ಗ್ರಾಹಕರಿಗೆ ನೀಡುತ್ತಿದೆ 78 ರೂಪಾಯಿಯ ಅಗ್ಗದ ಪ್ಲಾನ್

ಬಿಎಸ್‌ಎನ್‌ಎಲ್ ಗ್ರಾಹಕರಿಗೆ ನೀಡುತ್ತಿದೆ 78 ರೂಪಾಯಿಯ ಅಗ್ಗದ ಪ್ಲಾನ್
ಬೆಂಗಳೂರು , ಶನಿವಾರ, 24 ನವೆಂಬರ್ 2018 (12:18 IST)
ಬೆಂಗಳೂರು : ಜಿಯೋ, ವೋಡಾಫೋನ್, ಏರ್ಟೆಲ್ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಬಿಎಸ್‌ಎನ್‌ಎಲ್ ನ 78 ರೂಪಾಯಿಯ ಅಗ್ಗದ ಪ್ಲಾನ್ ವೊಂದನ್ನು ಶುರುಮಾಡಿದೆ.


ಬಿಎಸ್‌ಎನ್‌ಎಲ್ 78 ರೂಪಾಯಿ ಈ ಪ್ಲಾನ್ 10 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರಿಗೆ 2ಜಿಬಿ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ನೀಡ್ತಿದೆ. 2ಜಿಬಿ ಡೇಟಾ ಮುಗಿಯುತ್ತಿದ್ದಂತೆ ಗ್ರಾಹಕರಿಗೆ 80 ಕೆಬಿಪಿಎಸ್ ವೇಗದಲ್ಲಿ ಉಚಿತ ಡೇಟಾ ಲಭ್ಯವಾಗಲಿದೆ. ಮಾಹಿತಿ ಪ್ರಕಾರ ಈ ಪ್ಲಾನ್ ನಲ್ಲಿ 2ಜಿ ಹಾಗೂ 3ಜಿ ಇಂಟರ್ನೆಟ್ ಲಭ್ಯವಾಗಲಿದೆ.


ಆದರೆ ದೇಶದ ಎಲ್ಲ ಭಾಗಗಳಿಗೂ ಈ ರಿಚಾರ್ಜ್ ಪ್ಲಾನ್ ಲಬ್ಯವಾಗುತ್ತಿಲ್ಲ. ಮುಂಬೈ ಹಾಗೂ ದೆಹಲಿ ಬಳಕೆದಾರರಿಗೆ ಕರೆ ಸೌಲಭ್ಯವನ್ನು ಕಂಪನಿ ನೀಡ್ತಿದೆ. ಎಸ್‌ಎಂಎಸ್ ಮೂಲಕವೂ ಗ್ರಾಹಕರು ಈ ರಿಚಾರ್ಜ್ ಪ್ಲಾನ್ ಆಯಕ್ಟಿವ್ ಮಾಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಗ್ರಾಹಕರು STV COMBO78 ಎಂದು ಮೆಸ್ಸೇಜ್ ಟೈಪ್ ಮಾಡಿ 123ಗೆ ಕಳುಹಿಸಬೇಕಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಂಗಮಮಠದ ಗುರು ನಂಜೇಶ್ವರ ಸ್ವಾಮೀಜಿಯ ವಿರುದ್ಧ ದೂರು ದಾಖಲಿಸಿದ ಕಿರುತೆರೆ ನಟಿ