Select Your Language

Notifications

webdunia
webdunia
webdunia
webdunia

ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ

ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ
ನವದೆಹಲಿ , ಶುಕ್ರವಾರ, 21 ಡಿಸೆಂಬರ್ 2018 (07:39 IST)
ನವದೆಹಲಿ : ಸರ್ಕಾರಿ ರಜೆ ಹಾಗೂ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರದ  ಹಿನ್ನಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಬ್ಯಾಂಕುಗಳ ಬಾಗಿಲು ಮುಚ್ಚಲಿದೆ.


ಡಿಸೆಂಬರ್ 21ರಿಂದ 26ರ ವರೆಗೆ ಅದರಲ್ಲಿ ಡಿಸೆಂಬರ್ 24 ರಂದು ಹೊರತುಪಡಿಸಿ ಉಳಿದ ಐದು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಸರಣಿ ರಜೆಗಳಿಂದಾಗಿ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗುವ ಸಂಭವ ಹೆಚ್ಚಿದೆ.


ವೇತನ ಪರಿಷ್ಕರಣೆ ಹಾಗು ವಿವಿಧ ಬೇಡಿಕೆ ಈಡೇರಿಕೆಗಾಗಿ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಡಿಸೆಂಬರ್ 21ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹಾಗೇ ಡಿಸೆಂಬರ್ 22ರಂದು ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕುಗಳಿಗೆ ರಜೆ ಇರಲಿದೆ. ಡಿಸೆಂಬರ್ 23ರಂದು ಭಾನುವಾರದ ರಜೆ ಇದೆ.


ಡಿಸೆಂಬರ್ 24ರಂದು ಸೋಮವಾರ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿವೆ. ಆದರೆ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ರಜೆ ಇದೆ. ಡಿಸೆಂಬರ್ 26 ರಂದು ಬ್ಯಾಂಕ್ ಒಕ್ಕೂಟಗಳ ಮಹಾವೇದಿಕೆ ಮುಷ್ಕರಕ್ಕೆ ಕರೆ ನೀಡಿದ ಕಾರಣ ಅಂದು ಕೂಡ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಂತಾ ಕ್ಲಾಸ್‍ ನ ವೇಷಧರಿಸಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅಮೇರಿಕಾದ ಮಾಜಿ ಅಧ್ಯಕ್ಷ