Select Your Language

Notifications

webdunia
webdunia
webdunia
webdunia

ಅನುಚಿತ ವರ್ತನೆಯ ಆರೋಪ ; ಫ್ಲಿಪ್‌ಕಾರ್ಟ್ ಸಿಇಓ ಬಿನ್ನಿ ಬನ್ಸಲ್ ರಾಜೀನಾಮೆ

ಅನುಚಿತ ವರ್ತನೆಯ ಆರೋಪ ; ಫ್ಲಿಪ್‌ಕಾರ್ಟ್ ಸಿಇಓ ಬಿನ್ನಿ ಬನ್ಸಲ್ ರಾಜೀನಾಮೆ
ಬೆಂಗಳೂರು , ಬುಧವಾರ, 14 ನವೆಂಬರ್ 2018 (13:09 IST)
ಬೆಂಗಳೂರು : ಅನುಚಿತ ವರ್ತನೆಯ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಸಿಇಓ ಬಿನ್ನಿ ಬನ್ಸಲ್ ರಾಜೀನಾಮೆ ನೀಡುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.


ಆದರೆ ಬಿನ್ನಿ ತನ್ನ ವಿರುದ್ಧದ ಆರೋಪಗಳನ್ನುಅಲ್ಲಗಳೆದಿದ್ದಾರೆ. ಬಿನ್ನಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಫ್ಲಿಪ್‌ಕಾರ್ಟ್ ಹಾಗೂ ವಾಲ್‌ಮಾರ್ಟ್ ಸ್ವತಂತ್ರ ತನಿಖೆಯನ್ನು ನಡೆಸಿದ್ದರೂ ಕೂಡ ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ. ಆದರೆ ಅವರ ಸಮರ್ಥನೆ ಸಮಂಜಸವಾಗಿರದ ಕಾರಣ ರಾಜೀನಾಮೆ ಸ್ವೀಕರಿಸಲಾಗಿದೆ ಎಂದು ವಾಲ್‍ ಮಾರ್ಟ್ ಇಂಕ್ ಕಂಪನಿ ತಿಳಿಸಿದೆ.


ಹಾಗೇ ಮೈಂತ್ರಾ, ಜಬಾಂಗ್‌ಗಳನ್ನೊಳಗೊಂಡ ಪ್ಲಿಪ್‌ಕಾರ್ಟ್‌ನ ಸಿಇಓ ಆಗಿ ಕಲ್ಯಾಣ್ ಕೃಷ್ಣಮೂರ್ತಿ ಮುಂದುವರಿಯಲಿದ್ದಾರೆ, ಎಂದು ವಾಲ್‌ಮಾರ್ಟ್ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುರುಗ್ರಾಮ್ ನಲ್ಲೊಂದು ನಿರ್ಭಯ ಪ್ರಕರಣ ; ಕಾಮುಕರ ಪೇಶಾಚಿಕ ಕೃತ್ಯಕ್ಕೆ 5ವರ್ಷದ ಬಾಲಕಿ ಬಲಿ