Select Your Language

Notifications

webdunia
webdunia
webdunia
webdunia

ತನ್ನ ಬ್ರಾಡ್ಬ್ಯಾಂಡ್ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದ ಏರ್ಟೆಲ್

ತನ್ನ ಬ್ರಾಡ್ಬ್ಯಾಂಡ್  ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದ ಏರ್ಟೆಲ್
ನವದೆಹಲಿ , ಶುಕ್ರವಾರ, 22 ಫೆಬ್ರವರಿ 2019 (09:08 IST)
ನವದೆಹಲಿ : ರಿಲಾಯನ್ಸ್ ಜಿಯೋ ಗಿಗಾಫೈಬರ್ ಗೆ ಟಕ್ಕರ್ ನೀಡಲು ಏರ್ಟೆಲ್ ತನ್ನ ಬ್ರಾಡ್ಬ್ಯಾಂಡ್ ನ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದೆ.


ರಿಲಾಯನ್ಸ್ ಜಿಯೋ ಗಿಗಾಫೈಬರ್ ನಿಂದ ಉಳಿದ ಟೆಲಿಕಾಂ ಕಂಪನಿಗಳಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಬಿಎಸ್‌ಎನ್‌ಎಲ್ ತನ್ನ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಇದೀಗ ಏರ್ಟೆಲ್  ತನ್ನ ಬ್ರಾಡ್ಬ್ಯಾಂಡ್ ನ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದೆ.


ಏರ್ಟೆಲ್ ರೂ. 999 ಪ್ಲಾನ್ ಅಡಿಯಲ್ಲಿ ಗ್ರಾಹಕರಿಗೆ 250GB ಬ್ರಾಡ್ಬ್ಯಾಂಡ್ ಡೇಟಾವನ್ನು ನೀಡುತ್ತದೆ. ಭಾರತದಾದ್ಯಂತ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗೆ ಉಚಿತ ಧ್ವನಿ ಕರೆಗಳನ್ನು ಒದಗಿಸುತ್ತದೆ. ಏರ್ಟೆಲ್ ಈ ಯೋಜನೆಯಲ್ಲಿ 1000GB ಬೋನಸ್ ಡೇಟಾವನ್ನು ನೀಡುತ್ತಿದೆ. ಏರ್ಟೆಲ್ ರೂ. 799 ಅಥವಾ ಅದಕ್ಕೂ ಮೇಲ್ಪಟ್ಟ ಯೋಜನೆಗಳಿಗೆ ಈ ಆಫರ್ ಕೊಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಧಿಯ ಮೇಲಿನ ಆಸೆಯಿಂದ ಸ್ವಂತ ಅಜ್ಜಿಯನ್ನೇ ದೇವರಿಗೆ ಬಲಿ ಕೊಟ್ಟ ಪಾಪಿ ಮೊಮ್ಮಗ