Select Your Language

Notifications

webdunia
webdunia
webdunia
webdunia

ಗೂಗಲ್ ನಕ್ಷೆಗಳ 9 ಹೊಸ ವೈಶಿಷ್ಟ್ಯಗಳು

ಗೂಗಲ್ ನಕ್ಷೆಗಳ 9 ಹೊಸ ವೈಶಿಷ್ಟ್ಯಗಳು

lalsab

ಬೆಂಗಳೂರು , ಮಂಗಳವಾರ, 19 ಡಿಸೆಂಬರ್ 2017 (14:33 IST)
Google ನಕ್ಷೆಗಳು ಪ್ರಯಾಣಿಸುತ್ತಿರುವಾಗ ನಮ್ಮಲ್ಲಿ ಹೆಚ್ಚಿನವರಿಗೆ ಗೋ-ಟು-ಟೂಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ನಗರದಲ್ಲಿನ ಮಾರ್ಗದ ಟ್ರಾಫಿಕ್‌ ಪರಿಸ್ಥಿತಿಗಳಿಗೆ ಮಾತ್ರ ಅವಲಂಬಿಸಿರದೆ, ಇದು ನಾವು ತಿಳಿಯದಿರುವ ಸ್ಥಳಗಳಲ್ಲಿ ನಮ್ಮ ಗಮ್ಯಸ್ಥಾನವನ್ನು ತಲುಪಲು ಇದು SOS ಉಪಕರಣವಾಗಿದೆ. 

ಹೊಸ ನಗರಗಳು ಮತ್ತು ದೇಶಗಳಲ್ಲಿ ಮಾರ್ಗವನ್ನು ಕಂಡುಕೊಳ್ಳಲು Google ನಮಗೆ ಸಹಾಯ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ Google ನಕ್ಷೆಗಳಿಗೆ ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆ 9 ಹೊಸ ವೈಶಿಷ್ಟ್ಯಗಳು ಇಲ್ಲಿವೆ.
 
ಮೋಟಾರ್‌ಸೈಕಲ್ ಮೋಡ್
 
Google ಫಾರ್‌ ಇಂಡಿಯಾ, ಈ ವರ್ಷ ಮೊದಲ ಭಾರತದ-ನಿರ್ದಿಷ್ಟ ವೈಶಿಷ್ಟ್ಯ ಎಂದು ಕರೆಯುವ 'ಟು ವಿಲ್ಹರ್' ಮೋಡ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ಮೋಡ್‌ ಕಸ್ಟಮೈಸ್ ಮಾಡಿದ ಟ್ರಾಫಿಕ್ ಮತ್ತು ಆಗಮನ ಸಮಯದ ಅಂದಾಜಿನೊಂದಿಗೆ ಶಾರ್ಟ್‌ಕಟ್‌ಗಳನ್ನು ಹೊಂದಿರುವ ರಸ್ತೆ ಪ್ರಯಾಣಕ್ಕಾಗಿ ಮಾರ್ಗಗಳನ್ನು ತೋರಿಸುತ್ತದೆ. ಈ ಮೋಡ್‌ ಮಾರ್ಗ ಮಧ್ಯದಲ್ಲಿರುವ ಪ್ರಮುಖ ಲ್ಯಾಂಡ್‌ಮಾರ್ಕ್‌ಗಳನ್ನು ಸಹ ತೋರಿಸುತ್ತದೆ ಈ ಮೂಲಕ ಬೈಕ್‌ ಸವಾರರು ತಮ್ಮ ಪ್ರಯಾಣವನ್ನು ಅಚ್ಚುಕಟ್ಟಾಗಿ ಯೋಜಿಸಬಹುದು. ಈ ವೈಶಿಷ್ಟ್ಯವು ಪ್ರಸ್ತುತವಾಗಿ ಭಾರತದಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಇತರೆ ಎಲ್ಲಾ ದೇಶಗಳಲ್ಲಿ ಪರಿಚಯಿಸಲಾಗುತ್ತದೆ.
 
Google ನಕ್ಷೆಗಳನ್ನು ಬಳಸಿಕೊಂಡು ನಿಮ್ಮ ಕಾರನ್ನು ನೀವು ಎಲ್ಲಿ ನಿಲುಗಡೆ ಮಾಡಿದ್ದೀರಿ ಎಂಬುದನ್ನು ನೆನಪಿಡಿ
ಈ ವರ್ಷ Google ನಕ್ಷೆಗಳು Android ಮತ್ತು iOS ಬಳಕೆದಾರರು ತಮ್ಮ ಪಾರ್ಕ್‌ ಮಾಡಿದ ಕಾರುಗಳನ್ನು ಹುಡುಕಲು ಸಹಾಯ ಮಾಡುವಲ್ಲಿ ಪ್ರಮುಖ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಅಧಿಕೃತ ಬ್ಲಾಗ್‌ನಲ್ಲಿ ಹೀಗೆ ಹಂಚಿಕೊಂಡಿದೆ "Android ಬಳಕೆದಾರರು ನೀಲಿ ಚುಕ್ಕೆಯನ್ನು ಟ್ಯಾಪ್ ಮಾಡಬಹುದು ತದದನಂತರ ತಮ್ಮ ಪಾರ್ಕಿಂಗ್ ಸ್ಥಳವನ್ನು ನಕ್ಷೆಗೆ ಸೇರಿಸಲು "ನಿಮ್ಮ ಪಾರ್ಕಿಂಗ್ ಉಳಿಸಿ" ಟ್ಯಾಪ್ ಮಾಡಬಹುದು. ಅವರು ತಮ್ಮ ಕಾರ್‌ ಅನ್ನು ಎಲ್ಲಿ ಪಾರ್ಕ್‌ ಮಾಡಿದ್ದಾರೆ ಎಂಬುದನ್ನು ಗುರುತಿಸುವ ಲೇಬಲ್ ಅನ್ನು ನಕ್ಷೆಯಲ್ಲಿ ನೋಡಬಹುದು.
 
ಪ್ರಯಾಣಿಸಲು ದಿನದ ಅತ್ಯುತ್ತಮ ಸಮಯ
 
ಈ ವರ್ಷ ಜುಲೈನಲ್ಲಿ, Google ತನ್ನ ನಕ್ಷೆಗಳು ಅಪ್ಲಿಕೇಶನ್‌‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದ್ದು ಅದು ಬಳಕೆದಾರರಿಗೆ ಪ್ರಯಾಣಿಸಲು ದಿನದ ಅತ್ಯುತ್ತಮ ಸಮಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ವೈಶಿಷ್ಟ್ಯವು ಬಳಕೆದಾರರಿಗೆ ಹೊಸ ಸ್ಥಳ್ಕಕೆ ಹೋಗುವುದು ಹೇಗೆ, ಪ್ರಯಾಣಿಸಲು ಯಾವ ಮಾರ್ಗ ಸುಲಭ ಮತ್ತು ದಿನದ ಸಮಯ ಉಳಿತಾಯ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ಒದಗಿಸುತ್ತದೆ. ಅಪ್ಲಿಕೇಶನ್‌ ಬಾರ್‌ ಗ್ರಾಫ್‌‌ ಅನ್ನು ತೋರಿಸುತ್ತದೆ ಇದು ಅಂದಾಜು ಸಮಯ ಮತ್ತು ದೂರ ಹಾಗೂ ನಿಮ್ಮ ಮಾರ್ಗದಲ್ಲಿನ ಟೋಲ್‌‌ ಗೇಟ್‌ಗಳ ಸಂಖ್ಯೆಯ ಮಾಹಿತಿಯನ್ನು ಪ್ರದರ್ಶಿಸುತ್ತದೆ.
 
SOS ಎಚ್ಚರಿಕೆ
 
ಯಾವುದೇ ಬಿಕ್ಕಟ್ಟಿನ ಸಮಯದಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ಈ ವರ್ಷ Google ತನ್ನ ನಕ್ಷೆಗಳು ಅಪ್ಲಿಕೇಶನ್‌ನಲ್ಲಿ SOS ಎಚ್ಚರಿಕೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಯಾವುದೇ ಬಿಕ್ಕಟ್ಟಿನ ಸಮಯದಲ್ಲಿ ಬಳಕೆದಾರರು ನಕ್ಷೆಯಲ್ಲಿ ನಿರ್ದಿಷ್ಟ ಐಕಾನ್ ಅನ್ನು ನೋಡುತ್ತದೆ ಎಂದು ಕಂಪನಿಯು ಹೇಳಿದೆ. ಒಮ್ಮೆ ಅವರು ಐಕಾನ್‌‌ ಅನ್ನು ಟ್ಯಾಪ್‌‌ ಮಾಡಿದರೆ, ಸಹಾಯಕವಾಗುವ ಸಂಖ್ಯೆಗಳು ಮತ್ತು ವೆಬ್‌ಸೈಟ್‌ಗಳಂತವುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ನೋಡುತ್ತಾರೆ. ಇದರ ಜೊತೆಗೆ, ನಕ್ಷೆಯು ನೈಜ ಸಮಯದ ನವೀಕರಣಗಳನ್ನು ತೋರಿಸುತ್ತದೆ.
 
ಪ್ರಶ್ನೆ ಮತ್ತು ಉತ್ತರ ವಿಭಾಗ
 
ಪ್ರಸ್ತುತವಾಗಿ, Android ನಲ್ಲಿ ಲಭ್ಯವಿದೆ. ಈ Google ನಕ್ಷೆಗಳ ವೈಶಿಷ್ಟ್ಯವು ನಕ್ಷೆಯಲ್ಲಿ ನಿರ್ದಿಷ್ಟ ಸ್ಥಳದ ಬಗ್ಗೆ ಪ್ರಶ್ನೆಯನ್ನು ಕೇಳಲು ಬಳಕೆದಾರರಿಗೆ ಅನುಮತಿಸುತ್ತದೆ. ಕಂಪನಿಯು ಹೀಗೆ ಹೇಳುತ್ತದೆ - "ಪ್ರಶ್ನೆಯನ್ನು ಕೇಳಲು ಅಥವಾ ಉತ್ತರಿಸಲು - ಅಥವಾ ಸ್ಥಳದ ಕುರಿತಾದ ಪ್ರಸ್ತುತವಿರುವ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ಓದಲು - Google ನಕ್ಷೆಗಳು ಅಥವಾ ಹುಡುಕಾಟದಲ್ಲಿ ಸ್ಥಳವನ್ನು ಹುಡುಕಲು ಸರಳಿಕರಿಸಲಾಗಿದೆ ಹಾಗೂ ಸ್ಥಳೀಯ ವ್ಯವಹಾರ ವಿಭಾಗವನ್ನು ತೆರೆಯಲಾಗಿದೆ. ತದನಂತರ "ಪ್ರಶ್ನೆಗಳು ಮತ್ತು ಉತ್ತರಗಳು" ವಿಭಾಗಕ್ಕೆ ಸ್ಕ್ರಾಲ್‌ ಮಾಡಿ, ಇಲ್ಲಿ ನೀವು ಪ್ರಶ್ನೆಯನ್ನು ಸೇರಿಸಬಹುದು, ಯಾವುದಾದರೂ ಪ್ರಶ್ನೆಗೆ ಉತ್ತರಿಸಬಹುದು ಅಥವಾ ಥಂಬ್ಸ್‌ ಅಪ್ ಐಕಾನ್‌ ಟ್ಯಾಪ್‌ ಮಾಡುವ ಮೂಲಕ ಮಾಹಿತಿಯುಕ್ತವಾಗಿರುವುದನ್ನು ಅಪ್‌ವೋಟ್ ಮಾಡಬಹುದು. ಅಪ್‌ವೋಟ್ ಮಾಡಲಾದ ಪ್ರಶ್ನೆಗಳು ಮತ್ತು ಉತ್ತರಗಳು ವಿಭಾಗದ ಮೇಲ್ಬಾಗದಲ್ಲಿ ಕಾಣಿಸಿಕೊಳ್ಳುತ್ತದೆ ಈ ಮೂಲಕ ಅತ್ಯಂತ ಉಪಯುಕ್ತವಾದ ವಿಷಯಕ್ಕೆ ಹೆಚ್ಚು ಪ್ರವೇಶಿಸಬಹುದಾಗಿದೆ."
 
Google ನಕ್ಷೆಗಳ ಮೂಲಕ ಉಬರ್ ಅನ್ನು ಬುಕ್ ಮಾಡಿ
 
ಈ ವರ್ಷ Google ನಕ್ಷೆಗಳ ಮೂಲಕ ನೇರವಾಗಿ ಉಬರ್‌ ಬುಕ್‌ ಮಾಡಲು ಬೆಂಬಲಿಸುವ ವೈಶಿಷ್ಟ್ಯವನ್ನು Google ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯವು Android ಮತ್ತು iOS ಎರಡೂ ಬಳಕೆದಾರರಿಗೆ ಲಭ್ಯವಿದೆ. Google ನಕ್ಷೆಗಳಲ್ಲಿ ಉಬರ್‌ನ ಏಕೀಕರಣ, ಬಳಕೆದಾರರು ನೇರವಾಗಿ ಉಬರ್‌ಗೆ ನಕ್ಷೆಗಳ ಮೂಲಕ ವಿನಂತಿಸಲು ಅನುಮತಿಸುತ್ತದೆ. ಇದರ ಜೊತೆಗೆ ಬಳಕೆದಾರರಿಗೆ, ಸ್ಥಳಕ್ಕೆ ಪಿಕ್‌ಅಪ್‌ ಮಾಡಲು ಚಾಲಕರು ಎಲ್ಲಿದ್ದಾರೆ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಬಳಕೆದಾರರು ಚಾಲಕರಿಗೆ ಸಂಪರ್ಕಿಸಬಹುದು ಮತ್ತು Google ನಕ್ಷೆಗಳ ಮೂಲಕ ತಮ್ಮ ಪ್ರಯಾಣದ ಸ್ಥಿತಿಯನ್ನು ಮಾನಿಟರ್ ಮಾಡಬಹುದು.
 
ಮೆಚ್ಚಿನ ಸ್ಥಳಗಳ ಪಟ್ಟಿಯನ್ನು ಹಂಚಿಕೊಳ್ಳಿ
 
ಈ ವರ್ಷದ ಆರಂಭದಲ್ಲಿ, Google ನಕ್ಷೆಗಳು ಹೊಸ ನವೀಕರಣವನ್ನು ಹೊಂದಿದ್ದು, ಇದು ಬಳಕೆದಾರರಿಗೆ ತಮ್ಮ ನೆಚ್ಚಿನ ಸ್ಥಳಗಳು ಮತ್ತು ಸ್ಥಾನಗಳನ್ನು ಅವರ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವು Android ಮತ್ತು iOS ಎರಡೂ ಬಳಕೆದಾರರಿಗೆ ಲಭ್ಯವಿದೆ. ಆಯ್ದ ಸ್ಥಳವನ್ನು ಟ್ಯಾಪ್ ಮಾಡುವ ಮೂಲಕ ಮತ್ತು ನಂತರ ಉಳಿಸು ಆಯ್ಕೆಯನ್ನು ತಟ್ಟುವ ಮೂಲಕ ಬಳಕೆದಾರರಿಗೆ ಪಟ್ಟಿಯಲ್ಲಿ ಸ್ಥಳವನ್ನು ಸೇರಿಸಲು ಅವಕಾಶ ನೀಡುತ್ತದೆ. ಒಮ್ಮೆ ಸ್ಥಳವನ್ನು ಉಳಿಸಿದರೆ ಅದು ನಿಮಗೆ "ಮೆಚ್ಚಿನದು" "ಹೋಗಲು ಬಯಸುತ್ತೇನೆ" ಮತ್ತು "ನಕ್ಷತ್ರ ಹಾಕಿದ ಸ್ಥಳಗಳು" ಎಂಬುದಾಗಿ ಗುರುತಿಸಲು ಕೇಳುತ್ತದೆ. ಇದನ್ನು ಮಾಡಿದ ನಂತರ ನೀವು ಯಾವುದೇ ಪಟ್ಟಿಯನ್ನು ನಿಮ್ಮ ಸಂಪರ್ಕಗಳ ಜೊತೆಗೆ ಸುಲಭವಾಗಿ ಹಂಚಿಕೊಳ್ಳಬಹುದು.
 
Google ನಕ್ಷೆಗಳು ಪಿಕ್ಚರ್‌ ಇನ್ ಪಿಕ್ಚರ್‌ ಮೋಡ್
 
Google ಈ ವರ್ಷ ಜೂನ್‌‌ನಲ್ಲಿ ಹೊಸ ಆಪರೇಟಿಂಗ್ ಸಿಸ್ಟಂ Android 8.0 Oreo ಅನ್ನು ಪರಿಚಯಿಸಿದೆ. OS, ಪಿಕ್ಚರ್‌ ಇನ್ ಪಿಕ್ಚರ್‌ ಮೋಡ್ ಎಂಬ ಆಕರ್ಷಕ ವೈಶಿಷ್ಟ್ಯವನ್ನು ಒಳಗೊಂಡಿದೆ. ಇದೀಗ ಕಂಪನಿಯು ಅದೇ ವೈಶಿಷ್ಟ್ಯವನ್ನು  Google ನಕ್ಷೆಗಳಿಗೂ ಸೇರಿಸಿದೆ. ಈ ವೈಶಿಷ್ಟ್ಯವು Android 8.0 Oreo ರನ್‌ ಮಾಡುತ್ತಿರುವ ಸಾಧನದಲ್ಲಿ ಮಾತ್ರ ಕಾರ್ಯ ಮಾಡುತ್ತದೆ. Google ನಕ್ಷೆಗಳಲ್ಲಿ ಈ ವೈಶಿಷ್ಟ್ಯವನ್ನು ಬಳಸಲು ನ್ಯಾವಿಗೇಶನ್‌ ಮೋಡ್‌ನಲ್ಲಿರುವಾಗ ಬಳಕೆದಾರರು ಹೋಮ್ ಬಟನ್ ಅನ್ನು ದೀರ್ಘಕಾಲ ಒತ್ತಿಹಿಡಿಯಬೇಕು. ಇದು ನಂತರ ಅವರ ಪರದೆಯನ್ನು ಕುಗ್ಗಿಸುತ್ತದೆ ಮತ್ತು ಯಾವುದೇ ಇತರ ಅಪ್ಲಿಕೇಶನ್ ಅನ್ನು ಬಳಸಲು ಅನುಮತಿಸುತ್ತದೆ.
 
Google ನಕ್ಷೆಗಳು ಬಳಸಿಕೊಂಡು ಶೌಚಾಲವನ್ನು ಹುಡುಕಿ
 
ಈ ವರ್ಷ Google ಪರಿಚಯಿಸಿದ ಒಂದು ಆಸಕ್ತಿದಾಯಕ ವೈಶಿಷ್ಟ್ಯ ಇದಾಗಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸಾರ್ವಜನಿಕ ಶೌಚಾಲಯಗಳನ್ನು ಸುಲಭವಾಗಿ ಕಂಡುಕೊಳ್ಳಬಹುದು, ಬಳಕೆದಾರರು Google ನಕ್ಷೆಯಲ್ಲಿ ಕೇವಲ "ಶೌಚಾಲಯ" ಅಥವಾ "ಸಾರ್ವಜನಿಕ ಶೌಚಾಲಯ" ಎಂದು ಟೈಪ್‌ ಮಾಡಬೇಕು ತದನಂತರ ಹತ್ತಿರದ ಶೌಚಾಲಯಕ್ಕೆ ಹೋಗಲು ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಅಯೋಗ್ಯ ಪದಗಳು ಮಾತ್ರ ಗೊತ್ತಿವೆ: ಸಿಎಂ ಲೇವಡಿ