Select Your Language

Notifications

webdunia
webdunia
webdunia
webdunia

ಐಪಿಎಲ್: ಧೋನಿಯ ಎರಡು ಶಿಷ್ಯಂದಿರ ನಡುವೆ ಇಂದು ಪೈಪೋಟಿ

ಐಪಿಎಲ್: ಧೋನಿಯ ಎರಡು ಶಿಷ್ಯಂದಿರ ನಡುವೆ ಇಂದು ಪೈಪೋಟಿ
ಮುಂಬೈ , ಭಾನುವಾರ, 24 ಮಾರ್ಚ್ 2019 (09:01 IST)
ಮುಂಬೈ: ಐಪಿಎಲ್ ನ ಎರಡನೇ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.


ಈ ಪಂದ್ಯದಲ್ಲಿ ಎರಡೂ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವವರು ಧೋನಿಯನ್ನೇ ಗುರು ಸಮಾನವಾಗಿ ನೋಡುವವರು ಎನ್ನುವುದು ವಿಶೇಷ. ಆದರೆ ಅವರ ಪೈಕಿ ಡೆಲ್ಲಿ ಆಟಗಾರ ರಿಷಬ್ ಪಂತ್ ಗ್ಲೌಸ್ ತೊಡುವುದು ಪಕ್ಕಾ.

ಅವರು ಈಗಾಗಲೇ ಕಿರಣ್ ಮೋರೆ ಬಳಿ ಸಾಕಷ್ಟು ಸಲಹೆ ಸೂಚನೆ ಪಡೆದಿದ್ದು, ಮೊದಲ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿದ್ದಾರೆ. ಆದರೆ ಇನ್ನೊಂದೆಡೆ ಇಶಾನ್ ಕಿಶನ್ ಇದ್ದು, ಇವರೂ ಕೂಡಾ ಧೋನಿಯನ್ನು ಗುರುಸಮಾನವಾಗಿ ನೋಡುವ ಆಟಗಾರನೇ. ಆದರೆ ಇಶಾನ್ ಗೆ ಕೀಪಿಂಗ್ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಮುಂಬೈ ತಂಡದಲ್ಲಿ ಈಗಾಗಲೇ ಕ್ವಿಂಟನ್ ಡಿ ಕಾಕ್ ಮತ್ತು ಆದಿತ್ಯ ತಾರೆ ಹೆಚ್ಚುವರಿ ವಿಕೆಟ್ ಕೀಪರ್ ಗಳಿದ್ದಾರೆ.

ಮೇಲ್ನೋಟಕ್ಕೆ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ಬಲಿಷ್ಠವೆನಿಸಿದರೂ, ಹೊಸದಾಗಿ ಕಣಕ್ಕಿಳಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಬಾರಿ ಐಪಿಎಲ್ ನಲ್ಲಿ ಬಲಿಷ್ಠ ತಂಡವೆನಿಸಿಕೊಳ್ಳುವ ಎಲ್ಲಾ ಉತ್ಸಾಹವೂ ಇದೆ. ಹೀಗಾಗಿ ಇದೊಂದು ಸಮಬಲದ ಹೋರಾಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಪಂದ್ಯ ಸಮಯ: ರಾತ್ರಿ 8 ಗಂಟೆಗೆ.
ಸ್ಥಳ: ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಕೊಟ್ಟ ಲಸಿತ್ ಮಲಿಂಗಾ