Select Your Language

Notifications

webdunia
webdunia
webdunia
webdunia

ಇರಾನ್: ನೊಬೆಲ್‌ಗೆ ಸ್ಪರ್ಧೆ ನೀಡಲು ಪ್ರವಾದಿ ಹೆಸರಲ್ಲಿ ಪ್ರಶಸ್ತಿ

ಇರಾನ್: ನೊಬೆಲ್‌ಗೆ ಸ್ಪರ್ಧೆ ನೀಡಲು ಪ್ರವಾದಿ ಹೆಸರಲ್ಲಿ ಪ್ರಶಸ್ತಿ
PR
ಮುಸ್ಲಿಂ ಜಗತ್ತಿನಲ್ಲಿರುವ ಅದ್ಭುತ ವಿಜ್ಞಾನಿಗಳನ್ನು ಗುರುತಿಸುವ ದೃಷ್ಟಿಯಿಂದ ನೊಬೆಲ್‌ಗೆ ಪ್ರತಿಯಾಗಿ ಇರಾನ್‌ ಪ್ರಶಸ್ತಿಯೊಂದನ್ನು ಶುರು ಮಾಡಲಿದೆ.

ಪ್ರವಾದಿ ಮಹಮ್ಮದರ ಹೆಸರಿನಲ್ಲಿ ನೊಬೆಲ್‌ಗೆ 'ಸಮಾನಾಂತರವಾದ' ಶ್ರೇಷ್ಠ ಪ್ರವಾದಿ ವಿಶ್ವಪ್ರಶಸ್ತಿಯನ್ನು 2 ವರ್ಷಕ್ಕೊಮ್ಮೆ, 3 ತಾಂತ್ರಿಕ ಕ್ಷೇತ್ರಗಳಲ್ಲಿ ನೀಡಲಾಗುವುದು ಎಂದು ಎಂದು ಇರಾನಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಉಪಾಧ್ಯಕ್ಷೆ ನಸ್ರಿನ್‌ ಸೋಲ್ತಂಖಾನ್‌ ಹೇಳಿದ್ದಾರೆ. ಇದರಿಂದ ಮುಸ್ಲಿಂ ವಿಜ್ಞಾನಿಗಳಿಗೆ ಜಾಗತಿಕವಾಗಿ ನೊಬೆಲ್‌ನಂತಹ ಭಾರೀ ಪ್ರಶಸ್ತಿಗಳೆದುರು ಸ್ಪರ್ಧೆ ನಡೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

1901ರಲ್ಲಿ ನೊಬೆಲ್‌ ಶುರುವಾಯಿತು. 6 ಕ್ಷೇತ್ರಗಳಲ್ಲಿ ನೊಬೆಲ್‌ ನೀಡಲಾಗುತ್ತಿದೆ. 2003ರಲ್ಲಿ ಅಲ್ಲಿನ ಮಾನವ ಹಕ್ಕುಗಳ ಹೋರಾಟಗಾರ್ತಿ ಶಿರಿನ್‌ ಎಬಾದಿಗೆ ಪ್ರಶಸ್ತಿ ಬಂದಿದ್ದನ್ನು ಹೊರತುಪಡಿಸಿದರೆ ಇದುವರೆಗೆ ಬೇರಾವ ಇರಾನ್‌ ವ್ಯಕ್ತಿಯೂ ನೊಬೆಲ್‌ ಪಾತ್ರರಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಹಣದುಬ್ಬರದ ಎಫೆಕ್ಟ್:ಶೇರುಸೂಚ್ಯಂಕ 75 ಪಾಯಿಂಟ್ಸ್ ಕುಸಿತ