ಕುಂಡೆ ತೊಳೆಸಲು ಹೇಳಿದ ಪ್ರಯಾಣಿಕನ ಕಂಡು ದಂಗಾದ ಗಗನಸಖಿಯರು ಆಮೇಲೆ ಮಾಡಿದ್ದೇನು ಗೊತ್ತಾ?

ಶುಕ್ರವಾರ, 25 ಜನವರಿ 2019 (07:15 IST)
ಥೈವಾನ್ : ವಿಮಾನ ಪ್ರಯಾಣಿಕನೊಬ್ಬ ಗಗನಸಖಿಯರ ಬಳಿ ಕೇಳಿದ ಸಹಾಯಯೊಂದರಿಂದ ಗಗನಸಖಿಯರು ಮುಜುಗರಕ್ಕೀಡಾದ ಘಟನೆ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ನಡೆದಿದೆ.


ಕಳೆದ ಶನಿವಾರ ಲಾಸ್ ಏಂಜಲೀಸ್ ನಿಂದ ಥೈವಾನ್ ಗೆ ಹೊರಟ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ವ್ಹೀಲ್ ಚೇರ್ ನಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ  ಪ್ರಯಾಣ ಬೆಳೆಸಿದ್ದಾನೆ. ಆ ವೇಳೆ ಆತ  ಟಾಯ್ಲೆಟ್ ಗೆ ಹೋಗಲು ಗಗನಸಖಿಯರ ನೆರವು ಕೇಳಿದ.
ಅಲ್ಲಿ ಆತ ತನ್ನ ಒಳ ಉಡುಪುನ್ನು ಪೂರ್ತಿ ತೆಗೆಯಲು ಹೇಳಿದ್ದಲ್ಲದೆ ನಂತರ ಆತನ ಕುಂಡೆ ತೊಳೆಸಲು ಕೂಡ ಹೇಳಿದ್ದಾನೆ. ಆತ ಹೇಳಿದ್ದೇನು ಕೇಳಿ ಒಂದು ಕ್ಷಣ ದಂಗಾದ ಗಗನಸಖಿಯರು ಕೊನೆಗೆ ವಿಧಿ ಇಲ್ಲದೆ ಆ ಕೆಲಸವನ್ನು ಮಾಡಿದ್ದಾರೆ.  ಈ ಬಗ್ಗೆ ಗಗನಸಖಿಯೊಬ್ಬಳು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING