Select Your Language

Notifications

webdunia
webdunia
webdunia
webdunia

ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರು

ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ  ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರು
ನ್ಯೂಯಾರ್ಕ್ , ಶುಕ್ರವಾರ, 13 ಜುಲೈ 2018 (11:54 IST)
ನ್ಯೂಯಾರ್ಕ್ : ಪೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆಗೊಳಿಸಿದ ಸ್ವಂತ ಪರಿಶ್ರಮದಿಂದ ಉದ್ದಿಮೆ ಸ್ಥಾಪಿಸಿದ ಅಮೆರಿಕದ 60  ಮಂದಿ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತ ಮೂಲದ ಮಹಿಳೆಯರಿಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.

ಲಂಡನ್‌ನಲ್ಲಿ ಹುಟ್ಟಿ ಭಾರತದಲ್ಲಿ ಬೆಳೆದು 2008ರಿಂದ ಕಂಪ್ಯೂಟರ್‌ ನೆಟ್‌ವರ್ಕಿಂಗ್‌ ಸಂಸ್ಥೆಯಾದ ಅರಿಸ್ಟಾ ನೆಟ್‌ವರ್ಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಜಯಶ್ರೀ ಅವರು 8 ಸಾವಿರದ 900 ಕೋಟಿ ಆಸ್ತಿ ಹೊಂದುವುದರ ಮೂಲಕ 18ನೇ ಸ್ಥಾನ ಪಡೆದಿದ್ದಾರೆ. ಹಾಗೇ ಐಟಿ ಕನ್ಸಲ್ಟಿಂಗ್‌ ಹಾಗೂ ಔಟ್‌ಸೋರ್ಸಿಂಗ್‌ ಕಂಪನಿಯಾದ ಸಿಂಟೆಲ್‌ ಕಂಪನಿಯ ಉಪಾಧ್ಯಕ್ಷರಾಗಿರುವ ನೀರಜ್‌ ಸೇಥಿ ಅವರು 6 ಸಾವಿರದ 800 ಕೋಟಿ ಆಸ್ತಿ ಹೊಂದಿದ್ದು,21ನೇ ಸ್ಥಾನ ಪಡೆದಿದ್ದಾರೆ.

 

'ಅಮೆರಿಕದಲ್ಲಿರುವ ಮಹಿಳಾ ಉದ್ಯಮಿಗಳು ತಮ್ಮ ಸಾಧನೆ ಮೂಲಕ ಎತ್ತರಕ್ಕೆ ಏರುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು, ಸಿಮೆಂಟ್‌ ಕಂಪನಿಗಳ ತನಕ ಅತ್ಯಂತ ಕಡಿಮೆ ಅವಧಿಯಲ್ಲಿ ಕಂಪನಿ ಸ್ಥಾಪಿಸುವುದರಲ್ಲಿ ಹಿಂದಿಗಿಂತಲೂ ಹೆಚ್ಚಾಗುತ್ತದೆ. ಈ ರೀತಿಯ ಬೆಳವಣಿಗೆಗಳು ದೇಶದ ಬೆಳವಣಿಗೆಗೂ ಸಹಕಾರಿಯಾಗಿದ್ದು, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಂತರಾಗಿ ಹೊರಹೊಮ್ಮುತ್ತಿದ್ದಾರೆ' ಎಂದು ಪೋರ್ಬ್ಸ್‌ ವಿವರಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ವಿಪತ್ತು ನಿರ್ವಹಣೆ ತರಬೇತಿ ನೀಡಲು ವಿದ್ಯಾರ್ಥಿಯನ್ನು ಕಟ್ಟಡದಿಂದ ತಳ್ಳಿದ ತರಬೇತುದಾರ. ಆಮೇಲೆ ಆಗಿದ್ದೇನು?