ಅಮೇರಿಕಾದಲ್ಲಿ ಹಿಂದೂ ದೇವಾಲಯವನ್ನು ಭಗ್ನಗೊಳಿಸಿದ ದುಷ್ಕರ್ಮಿಗಳು

ಶುಕ್ರವಾರ, 1 ಫೆಬ್ರವರಿ 2019 (06:02 IST)
ವಾಷಿಂಗ್ಟನ್ : ಜನಾಂಗೀಯ ದ್ವೇಷದ ಹಿನ್ನಲೆಯಲ್ಲಿ ಅಮೆರಿಕದ ಕೆಂಟಕಿ ರಾಜ್ಯದಲ್ಲಿ ಹಿಂದೂ ದೇವಾಲಯವೊಂದನ್ನು ಭಗ್ನಗೊಳಿಸಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.

ಕೆಂಟಕಿ ಪ್ರಾಂತ್ಯದ ಲೂಯಿಸ್‍ ವಿಲ್ಲೆ ನಗರದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿ ದೇವರಿಗೆ ಕಪ್ಪು ಬಣ್ಣ ಬಳಿದು ಭಗ್ನಗೊಳಿಸಿ, ಹಾಲ್ ನಲ್ಲಿರುವ ಕುರ್ಚಿಗೆ ಚಾಕುವನ್ನು ಚುಚ್ಚಿದ್ದಾರೆ.  ಅಲ್ಲದೇ ದೇವಾಲಯದ  ಕಿಟಕಿಗಳನ್ನು ಒಡೆದು ಗೋಡೆಗಳ ಮೇಲೆ ಅವಹೇಳನಕಾರಿ ಸಂದೇಶ ಮತ್ತು ಗೀಚುಬರಹಗಳನ್ನು ಬರೆಯಲಾಗಿದೆ. ಮಂದಿರದ ಕಪಾಟಿನಲ್ಲಿದ್ದ ವಸ್ತುಗಳನ್ನು ಕೂಡ ದೋಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

 

ಈ ಘಟನೆಯಿಂದ ಭಾರತೀಯ ಮೂಲದ ಅಮೆರಿಕನ್ ಸಮುದಾಯದಲ್ಲಿ ಆತಂಕ ಉಂಟಾಗಿದ್ದು, ಪ್ರಕರಣದ ಬಗ್ಗೆ ಅಮೆರಿಕದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING