Select Your Language

Notifications

webdunia
webdunia
webdunia
webdunia

ಕ್ಯಾನ್ಸರ್ ರೋಗಿಯ ಕೊನೆಯ ಆಸೆ ಈಡೇರಿಸಿ ಸಾಹಸ ಮೆರೆದ ಪಿಜ್ಜಾ ಬಾಯ್

ಕ್ಯಾನ್ಸರ್ ರೋಗಿಯ ಕೊನೆಯ ಆಸೆ ಈಡೇರಿಸಿ ಸಾಹಸ ಮೆರೆದ ಪಿಜ್ಜಾ ಬಾಯ್
ಅಮೇರಿಕಾ , ಮಂಗಳವಾರ, 23 ಅಕ್ಟೋಬರ್ 2018 (12:24 IST)
ಅಮೇರಿಕಾ : ಸಾವಿನಂಚಿನಲ್ಲಿರುವ ತಮ್ಮವರ ಆಸೆಯನ್ನು ಈಡೇರಿಸಲು ನಾವು ಪ್ರಯತ್ನ ಪಡುತ್ತೇವೆ. ಆದರೆ ಯಾವುದೇ
ಸಂಬಂಧವಿಲ್ಲದ  ಪಿಜ್ಜಾ ಬಾಯ್ ಯೊಬ್ಬ  ಕ್ಯಾನ್ಸರ್ ಪೀಡಿತ ರೋಗಿಯ ಆಸೆ ಈಡೇರಿಸಲು ಮಾಡಿದ ಕೆಲಸಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಹೌದು. ಅಮೆರಿಕಾದ ಮೆಷಿಗನ್ ನಲ್ಲಿ ರಿಚ್ ಮಾರ್ಗನ್ ಎನ್ನುವ ವ್ಯಕ್ತಿ  ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಸುಮಾರು 25 ವರ್ಷದ ‌ಹಿಂದೆ ರಿಚ್ ಮಾರ್ಗನ್ ತಮ್ಮ ಪತ್ನಿ  ಜ್ಯೂಲಿಯ ಜೊತೆ ಅಮೆರಿಕಾದ ಮೆಷಿಗನ್ ನಲ್ಲಿ ವಾಸವಾಗಿದ್ದಾಗ, ಪಿಜ್ಜಾ ಸೇವಿಸುತ್ತಿದ್ದರು. ಆದರೆ ಬಳಿಕ‌ ಇಂಡಿಯಾನಾ ಪೊಲೀಸ್ ಎಂಬಲ್ಲಿ ಸ್ಥಳಾಂತರಗೊಂಡಿದ್ದರು.


ಒಮ್ಮೆ ಅವರು ಪಿಜ್ಜಾ ತಿನ್ನಬೇಕೆಂದು ಮಿಷಿಗನ್ ಗೆ ಹೊರಟಾಗ ರಿಚ್ ಗೆ ಕ್ಯಾನ್ಸರ್ ಸಮಸ್ಯೆ ಉಲ್ಬಣಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಆದರೆ ಅವರ ಪಿಜ್ಜಾ ತಿನ್ನುವ ಆಸೆ ಉಳಿದೆ ಹೋಯ್ತು. ಆಗ ರಿಚ್ ಗೆ ಇಷ್ಟವಾದ ‌ಸ್ಟೀವ್ ಪಿಜ್ಜಾ ಅಂಗಡಿಗೆ ‌ಜ್ಯೂಲಿ‌ ತಂದೆ ಕರೆ ಮಾಡಿ, ಪರಿಸ್ಥಿತಿ ‌ವಿವರಿಸಿ ಪಿಜ್ಜಾ ನೀಡಿ ಅವರ ಕೊನೆಯಾಸೆ ಈಡೇರಿಸುವಂತೆ ಕೇಳಿಕೊಂಡಾಗ 800 ಕಿ.ಮೀ. ದೂರ ಎಂದರೂ ನಿರಾಕರಿಸದೆ ಕೂಡಲೆ ಮ್ಯಾನೇಜರ್ ಪಿಜ್ಜಾ ಆರ್ಡರ್ ತೆಗೆದುಕೊಂಡು ಸುಮಾರು ನಾಲ್ಕು‌ ಗಂಟೆ ಪ್ರಯಾಣಿಸಿ ಕ್ಯಾನ್ಸರ್ ರೋಗಿಯ ಇಷ್ಟದ ಪಿಜ್ಜಾ ನೀಡಿ ಮಾನವೀಯತೆ ಮರೆದಿದ್ದಾರೆ. ಇದನ್ನು ಜ್ಯೂಲಿ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದು,  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆ ವಿರೋಧವಾಗಿ ಬಿಜೆಪಿಗೆ ಓಟ್ ಹಾಕುತ್ತೇವೆ ಎಂದ ರಮ್ಯಾ ಅಭಿಮಾನಿಗಳು