ಆರ್ಥಿಕ ಸಂಕಷ್ಟ ನೀಗಿಸಿಕೊಳ್ಳಲು ಕತ್ತೆಗಳ ಮೋರೆ ಹೋದ ಪಾಕಿಸ್ತಾನ

ಬುಧವಾರ, 6 ಫೆಬ್ರವರಿ 2019 (06:43 IST)
ಪಾಕಿಸ್ತಾನ : ಆರ್ಥಿಕ ಸಂಕಷ್ಟ ಎದುರಿಸುವ ಪಾಕಿಸ್ತಾನ ಈ ಸಮಸ್ಯೆಯಿಂದ ಹೊರಬರಲು ಕತ್ತೆಗಳನ್ನು ರಫ್ತು ಮಾಡಲು ನಿರ್ಧರಿಸಿದೆ ಎಂಬುದಾಗಿ ತಿಳಿದುಬಂದಿದೆ.


ಹೌದು. ಪಾಕಿಸ್ತಾನದಲ್ಲಿ 50 ಲಕ್ಷಕ್ಕೂ ಅಧಿಕ ಕತ್ತೆಗಳಿವೆ ಎನ್ನಲಾಗಿದೆ. ಅಲ್ಲದೇ ಚೀನಾದಲ್ಲಿ ಕತ್ತೆಗಳ ಚರ್ಮದಿಂದ ಔಷಧಿಯನ್ನು ತಯಾರಿಸಲಾಗುತ್ತಿದ್ದು, ಈ ಔಷಧಿಯನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ.


ಆದ್ದರಿಂದ  ಪಾಕಿಸ್ತಾನ, ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡುವ ಮೂಲಕ ವಿದೇಶಿ ವಿನಿಮಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಕತ್ತೆಗಳಿಗೆ ಬೇಡಿಕೆ ಇರುವ ಚೀನಾಗೆ ಮೊದಲ ಮೂರು ವರ್ಷ ಸುಮಾರು 80 ಸಾವಿರ ಕತ್ತೆಗಳನ್ನು ರಫ್ತು ಮಾಡಲಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING