Webdunia - Bharat's app for daily news and videos

Install App

ಎಂಎಂಎಲ್ ಪಕ್ಷದ ನಾಯಕ ಹಫೀಜ್ ಸಯೀದ್ ಗೆ ಫೇಸ್ ಬುಕ್ ನೀಡಿದೆ ಬಿಗ್ ಶಾಕ್

Webdunia
ಸೋಮವಾರ, 16 ಜುಲೈ 2018 (09:21 IST)
ಲಾಹೋರ್ : ಜು.25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಎಂಎಂಎಲ್ (ಇಸ್ಲಾಮಿಸ್ಟ್ ಮಿಲ್ಲಿ ಮುಸ್ಲಿಂ ಲೀಗ್) ಪಕ್ಷದ ನಾಯಕ ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್ ಅವರಿಗೆ ಫೇಸ್ ಬುಕ್ ಬಿಗ್ ಶಾಕ್ ವೊಂದನ್ನು ನೀಡಿದೆ.


ಇತ್ತೀಚೆಗಷ್ಟೇ ಪಾಕಿಸ್ತಾನ ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದ ಫೇಸ್ ಬುಕ್, ಜು.25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ವಿವಿಧ ರಾಜಕೀಯ ಪಕ್ಷಗಳ ನಕಲಿ ಖಾತೆಗಳನ್ನು ತೆಗೆದುಹಾಕಲು ಸ್ಥಳೀಯ ಸಂಸ್ಥೆಗಳಿಗೆ ನೆರವು ನೀಡುವುದಾಗಿ ಹೇಳಿದ್ದು. ಆ ಮೂಲಕ ಎಂಎಂಎಲ್ ಪಕ್ಷಕ್ಕೆ ಸೇರಿದ ಫೇಸ್ ಬುಕ್ ನ ಹಲವು ಪೇಜ್ ಹಾಗೂ ಖಾತೆಗಳನ್ನು ಫೇಸ್ ಬುಕ್ ನಿಷ್ಕ್ರಿಯಗೊಳಿಸಿದೆ.


ಸಕಾರಾತ್ಮಕ ಚರ್ಚೆಗಳನ್ನು ಉತ್ತೇಜಿಸುವುದು ತಮ್ಮ ಸಮಾಜಿಕ ಜಾಲತಾಣದ ಆದ್ಯತೆಯಾಗಿದೆ. ಯಾವುದೇ ಸಮಾಜಘಾತುಕ ಸಂಘಟನೆಗಳು ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವಂತೆ ಎಚ್ಚರಿಕೆ ವಹಿಸುವುದು ತಮ್ಮ ಉದ್ದೇಶವಾಗಿದೆ ಎಂದು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments